ಪಾಂಡವಪುರ:– ಸಾಲಭಾದೆಯಿಂದ ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಪದ್ಮರಾಜ್ ಪತ್ನಿ ಸುಲೋಚನ (32) ಮೃತ ಗೃಹಿಣಿ. ಕೆನ್ನಾಳು ಗ್ರಾಮದ ಪದ್ಮರಾಜ್, ಪತ್ನಿ ಸುಲೋಚನ ಎಂಬುವರು ಮನೆ ನಿರ್ಮಾಣಕ್ಕಾಗಿ ಖಾಸಗಿ ಸಂಘ-ಸಂಸ್ಥೆ ಸೇರಿದಂತೆ ಲಕ್ಷಾಂತ ರು. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲ ತೀರಿಸುವುದಕ್ಕಾಗಿಯೇ ಮೃತ ಗೃಹಿಣಿ ಸುಲೋಚನ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಹಿಂಸೆ ಹೆಚ್ಚಾಗಿ ಸಾಲ ತೀರಿಸುವಂತೆ ಮನೆಗಳ ಮುಂದೆ ಬಂದು ಸಾಲಗಾರರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಸುಲೋಚನ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ತಾಯಿ ಪುಟ್ಟಲಕ್ಷ್ಮಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹವನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.