ಬೆಳಗಾವಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಮೀಸಲಾತಿ ಹೋರಾಟ ಯಶಸ್ವಿ ಆಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲ ಶಾಸಕರೂ ನಮ್ಮ ಹೋರಾಟದ ಪರವಾಗಿ ಇದ್ದಾರೆ. ರೂಲಿಂಗ್ ಪಕ್ಷದ ವಿನಯ ಕುಲಕರ್ಣಿ ನನಗೆ ಪಕ್ಷ ಮುಖ್ಯವಲ್ಲ, ಸಮಾಜ ಎಂದು ಹೇಳಿದ್ದಾರೆ. ಅಂತಹ ಮುತ್ತಿನಂತಹ ಶಾಸಕರು ನಮ್ಮ ಜೊತೆಗೆ ಇದ್ದಾರೆ. ಪಂಚಮಸಾಲಿ ಹೋರಾಟಕ್ಕೆ ಮರಾಠಾ ಮೀಸಲಾತಿ ಹೋರಾಟ ದೊಡ್ಡ ಭರವಸೆ. ಅವರು ಯಶಸ್ವಿ ಆಗಿದ್ದಾರೆ. ಅವರು ಭೂಮಾಲೀಕರು ನಾವೂ ಭೂ ಮಾಲೀಕರು. ಈಗ ಅವರೂ ಭೂ ರಹಿತರು,ನಾವೂ ಭೂ ರಹಿತರು. ನಮ್ಮ ಹೋರಾಟ ಖಂಡಿತ ಯಶಸ್ವಿ ಆಗಲಿದೆ ಎಂದರು.
ಬಿಜೆಪಿಯಲ್ಲಿ ಭಿನ್ನಮತ ವಿಚಾರ : ಶಾಸಕ ಯತ್ನಾಳ ಪರ ಬಸವಜಯ ಮೃತ್ಯುಂಜಯ ಶ್ರೀ ಬ್ಯಾಟಿಂಗ್