ಬೆಂಗಳೂರು:- ಪಾನ್ ಬೀಡಾ ಬೆಲೆ ಹೆಚ್ಚಳವಾಗಿದ್ದು, ಪಾನ್ ಪ್ರಿಯರು ಕಂಗಾಲಾಗಿದ್ದಾರೆ.
ಎಲೆಗಳ ಬೆಲೆ ಒಂದು ಕಟ್ಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಪಾನ್ಗಳ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಸ್ವೀಟ್ ಪಾನ್ಗಳು 5 ರಿಂದ 10 ರೂಪಾಯಿ ಸಿಗುತ್ತಿದ್ದವು. ಆದರೆ ಇದೀಗ ಪಾನ್ ಬೀಡಾಗಳ ಪ್ರಾರಂಭಿಕ ಬೆಲೆ 20 ರೂ.ಗಳಿಂದ 60 ರೂ.ವರೆಗೂ ಏರಿಕೆಯಾಗಿವೆ. ಚಾಕೊಲೇಟ್ ಪಾನ್ ಈ ಹಿಂದೆ 40 ರೂ. ಇತ್ತು, ಆದರೆ ಇದೀಗ 50 ರೂಪಾಯಿಯಾಗಿದೆ.
ಮಲೈಯೆ ಬೀಡಾ 40 ರೂ. ಇತ್ತು. ಇದೀಗ 45 ರೂ. ಆಗಿದೆ. ಕೊಲ್ಕತ್ತ ಸಾದಾ ಪಾನ್ 20 ರಿಂದ 30, ಆರೆಂಜ್ ಡ್ರೈ ಫ್ರೂಟ್ ಬೀಡಾ 25 ರಿಂದ 20, ಚಾಕೊಲೇಟ್ ಪಾನ್ 25 ರಿಂದ 15, ವೆನಿಲಾ ಪಾನ್ 25 ರಿಂದ 30, ಚಾಕೊಲೇಟ್ ಡೇಟ್ಸ್ 25 ರಿಂದ 40, ವೆನಿಲಾ ಡೇಟ್ಸ್ 20 ರೂ. ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಎಂದು ವ್ಯಾಪಾರಸ್ಥ ಸಂದೀಪ್ ಪಾಂಡೆ ಹೇಳಿದರು.
ಈ ಹಿಂದೆ ಎಲೆ ಅಡಿಕೆ ತಿನ್ನುತ್ತಿದ್ವಿ, ಬಳಿಕ ಪಾನ್ ಪೀಡಾಗಳನ್ನು ತಿನ್ನಲು ಶರು ಮಾಡಿದ್ವಿ. ಈ ಹಿಂದೆ ಕಡಿಮೆ ಬೆಲೆ ಪಾನ್ಗಳು ಸಿಗುತಿದ್ದವು. ಆದರೆ, ಈಗ ಪಾನ್ಗಳ ಬೆಲೆ ಏರಿಕೆಯಾಗಿದೆ. ಒಂದೊಂದು ಏರಿಯಾದಲ್ಲಿ ಒಂದೊಂದು ಬೆಲೆ ಇದೆ. ಸಿಕ್ಕಾಪಟ್ಟೆ ಜಾಸ್ತಿಮಾಡಿದ್ದಾರೆ. ಆದರೂ ತಿನ್ನುತ್ತೇವೆ. ಬಿಡಲು ಆಗುತ್ತಿಲ್ಲ ಎಂದು ಗ್ರಾಹಕ ಗುರುರಾಜ್ ಹೇಳಿದರು.