ಕಂಟೈನರ್ ಮೇಲೆ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನ್ ಸೇನೆ ಎತ್ತಿ ಕೆಳಕ್ಕೆ ಎಸೆದು ಕೊಂದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಸ್ಲಿಂಮರ ರಕ್ಷಕ ಎಂದೇ ಕರೆಸಿಕೊಳ್ಳುವ ಪಾಕಿಸ್ತಾನದಲ್ಲಿ ಮುಸ್ಲಿಂಮರಿಗೆ ರಕ್ಷಣೆಯೇ ಇಲ್ಲ ಅನ್ನೋದು ಈ ವಿಡಿಯೋದಲ್ಲಿ ತಿಳಿದು ಬಂದಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಮುಸ್ಲಿಂ ವ್ಯಕ್ತಿಯೋರ್ವ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿ ಕೂತಿದ್ದಾನೆ.
ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನದ ರೇಂಜರ್ಗಳು ಸುತ್ತುವರೆದಿದ್ದಾರೆ. ಜೊತೆಗೆ ನಮಾಜ್ ಮಾಡುವಾಗ ಯುವಕನನ್ನು ಹಿಂಬದಿಯಿಂದ ತಳ್ಳಿ ಕಂಟೇನರ್ ಮೇಲಿಂದ ಎಸೆದಿದ್ದಾರೆ. ಈ ವೇಳೆ ಕತ್ತು ಮುರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.