ಇಸ್ಲಾಮಾಬಾದ್: ಫೆಬ್ರವರಿ 8 ರಂದು ನಡೆಯಲಿರುವ ಚುನಾವಣೆಗೆ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಸಂಸ್ಥಾಪಕ ಇಮ್ರಾನ್ ಖಾನ್ (Imran Khan) ಸಲ್ಲಿಸಿದ ನಾಮಪತ್ರಗಳನ್ನು ಪಾಕಿಸ್ತಾನ ಚುನಾವಣಾ ಆಯೋಗ ತಿರಸ್ಕರಿಸಿದೆ. ಪಾಕಿಸ್ತಾನದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಗೊಂಡಿದ್ದರೂ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ತಮ್ಮ ತವರು ಕ್ಷೇತ್ರವಾದ ಮಿಯಾನ್ವಾಲಿಯಿಂದ ನಾಮಪತ್ರ ಸಲ್ಲಿಸಿದ್ದರು.
ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯ NA-89 ಕ್ಷೇತ್ರಕ್ಕೆ ತಮ್ಮ ನಾಮಪತ್ರ ಪತ್ರಗಳನ್ನು ಸಲ್ಲಿಸಿದ್ದರು. ಮಾಜಿ ಪ್ರಧಾನಿ ಪರವಾಗಿ ಪಿಟಿಐ ಮುಖಂಡ ಉಮರ್ ಬೋಡ್ಲಾ ಹಾಜರಾಗಿದ್ದರು. ಪಿಟಿಐ ಸಂಸ್ಥಾಪಕ, 70 ವಯಸ್ಸಿನ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ. ಅವರು ಏಪ್ರಿಲ್ 2022 ರಲ್ಲಿ ಸಂಸತ್ತಿನ ಅವಿಶ್ವಾಸ ಮತದಲ್ಲಿ ಪದಚ್ಯುತಗೊಂಡಾಗಿನಿಂದ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಖಾನ್ ಅವರನ್ನು ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಅದನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ತಿರಸ್ಕರಿಸಿತು. ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇನ್ನೂ ಎರಡು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿರುವುದರಿಂದ ಜೈಲಿನಿಂದ ಹೊರಬರುವುದು ಕಷ್ಟ ಸಾಧ್ಯವಿದೆ.