ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕ್ ತಂಡವನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿದೆ.
ಮಲಗಿದ್ದಾಗ ಬಾಯಲ್ಲಿ ಜೊಲ್ಲು ಬರ್ತಿದ್ರೆ ನಿರ್ಲಕ್ಷ್ಯ ಬೇಡ: ಇದು ಈ ಕಾಯಿಲೆ ಸಂಕೇತ!
ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ ಭರ್ಜರಿಯಾಗಿ ಗೆದ್ದಿದ್ದು, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪರ ಮಾಜಿ ಕ್ಯಾಪ್ಟನ್ ಬಾಬರ್ ಆಜಂ ಮತ್ತು ಯುವ ಬ್ಯಾಟರ್ ಇಮಾಮ್-ಉಲ್-ಹಕ್ ಜೋಡಿ ಓಪನಿಂಗ್ ಮಾಡಿತು. ಬಾಬರ್ ಅಜಂ ತಾನು ಎದುರಿಸಿದ 26 ಬಾಲ್ನಲ್ಲಿ 5 ಫೋರ್ ಸಮೇತ 23 ರನ್ ಸಿಡಿಸಿ ಔಟಾದ್ರು. ಇಮಾಮ್-ಉಲ್-ಹಕ್ ಕೇವಲ 10 ರನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗೆ ಬಂದ ಸೌದ್ ಶಕೀಲ್ ಉತ್ತಮ ಇನ್ನಿಂಗ್ಸ್ ಆಡಿದರು. 76 ಎಸೆತಗಳಲ್ಲಿ 5 ಫೋರ್ ಸಮೇತ 62 ರನ್ ಚಚ್ಚಿದ್ರು. ಇವರಿಗೆ ಸಾಥ್ ನೀಡಿದ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಅವರು 77 ಬಾಲ್ನಲ್ಲಿ 3 ಫೋರ್ ಸಮೇತ 46 ರನ್ ಸಿಡಿಸಿದ್ರು.
ಸಲ್ಮಾನ್ ಆಘಾ 19, ಖುಶ್ದಿಲ್ ಶಾ ಅವರು 2 ಸಿಕ್ಸರ್ ಸಮೇತ 38 ರನ್ ಬಾರಿಸಿದರು. ನಸೀಪ್ ಶಾ 14, ಹ್ಯಾರೀಸ್ ರೌಫ್ 8, ತಯ್ಯಬ್ ತಾಹಿರ್ 4 ರನ್ ಕಲೆ ಹಾಕಿದರು. ಪಾಕ್ ತಂಡ 49.4 ಓವರ್ನಲ್ಲಿ 241 ರನ್ ಕಲೆ ಹಾಕಿದ್ದು, ಟೀಮ್ ಇಂಡಿಯಾಗೆ ಸಾಧಾರಣ ಟಾರ್ಗೆಟ್ ಕೊಟ್ಟಿತು.
ಸಾಧಾರಣ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಭರ್ಜರಿ ರನ್ ಕಲೆ ಹಾಕಿತ್ತು. ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ 15 ಬಾಲ್ ಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅದರಂತೆ ಗಿಲ್ 46(52), ವಿರಾಟ್ ಕೊಹ್ಲಿ 100(111), ಶ್ರೇಯಸ್ ಅಯ್ಯರ್ 56(67), ಹಾರ್ದಿಕ್ ಪಾಂಡ್ಯ 8(6) ಅಕ್ಷರ್ ಪಟೇಲ್ 3(4), ಗಳಿಸಿದರು. ಒಟ್ಟಾರೆ ಪಾಕ್ ವಿರುದ್ಧ ಟೀಮ್ ಇಂಡಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದೆ.