ಅಗರ್ತಲಾ:– ಪಾಕಿಸ್ತಾನ ಮಾನವೀಯತೆಗೆ ಬಡಿದ ಕ್ಯಾನ್ಸರ್ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈದ್ ಮಿಲಾದ್: ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ ಪುಂಡರು!
ಈ ಸಂಬಂಧ ಮಾತನಾಡಿದ ಅವರು, ಪಾಕಿಸ್ತಾನ ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ನೀಡುವವರೆಗೆ ನಾವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈಗ, ಪಾಕ್ ಆಕ್ರಮಿತ ಕಾಶ್ಮೀರ ಮುಕ್ತವಾಗಲು ಮತ್ತು ಮತ್ತೆ ಭಾರತದ ಭಾಗವಾಗಲು ಒತ್ತಾಯಿಸುತ್ತಿದೆ. ಪಾಕಿಸ್ತಾನವು ಮಾನವೀಯತೆಗೆ ಕ್ಯಾನ್ಸರ್. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಶ್ವದ ರಾಷ್ಟ್ರಗಳು ಒಗ್ಗೂಡಬೇಕು” ಎಂದು ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆದಿತ್ಯನಾಥ್ ಹೇಳಿದ್ದಾರೆ.
ಆದಿತ್ಯನಾಥ್ ಅವರು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಕರೆ ನೀಡುತ್ತಿರುವುದು ಇದೇ ಮೊದಲಲ್ಲ. ಮೇ 18 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಆರು ತಿಂಗಳೊಳಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಲಿದೆ ಎಂದು ಯುಪಿ ಸಿಎಂ ಹೇಳಿದ್ದರು.