ಮಾನವ ಕಳ್ಳಸಾಗಣೆ ಆರೋಪ ಪ್ರಕರಣದ ಸಂಬಂಧ ಪಾಕಿಸ್ತಾನ ಮೂಲದ ಮಾನವ ಹಕ್ಕುಗಳ ಹೋರಾಟಗಾರ ಸರೀಮ್ ಬರ್ನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸರೀಮ್ ಬರ್ನಿ 5ಕ್ಕೂ ಹೆಚ್ಚು ಮಕ್ಕಳನ್ನು ಕಳ್ಳಸಾಗಣೆ ಮಾಡಿದ ಹಾಗೂ ಅಮೆರಿಕದಲ್ಲಿ ಮಕ್ಕಳನ್ನು ಅಕ್ರಮವಾಗಿ ದತ್ತು ನೀಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಅಮೆರಿಕ ಸರ್ಕಾರ ಮಾಹಿತಿ ನೀಡಿತ್ತು.
ಹೀಗಾಗಿ ಬರ್ನಿ ಅಮೆರಿಕದಿಂದ ಕರಾಚಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಾನವ ಕಳ್ಳಸಾಗಣೆ ಕುರಿತು ತನಿಖೆ ನಡೆಸುವ ತನಿಖಾ ಸಂಸ್ಥೆಯು (ಎಫ್ಐಎ) ಬಂಧಿಸಿದೆ ಎಂದು ವರದಿಯಾಗಿದೆ.
ಶೋಷಿತ ಮಕ್ಕಳ ಪರ ಕಾರ್ಯ ನಿರ್ವಹಿಸುವ ವೆಲ್ಫ್ಫೇರ್ ಟ್ರಸ್ಟ್ ಇಂಟರ್ನ್ಯಾಷನಲ್ ಎನ್ನುವ ಟ್ರಸ್ಟ್ನ ನೇತೃತ್ವವನ್ನು ಸರೀಮ್ ಬರ್ನಿ ವಹಿಸಿದ್ದಾರೆ. ಈ ಟ್ರಸ್ಟ್ ಕಿರುಕುಳ, ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ, ಮನೆಯಲ್ಲಿ ನಡೆಯುವ ಹಿಂಸಾಚಾರ, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಇನ್ನಿತರ ಘಟನೆಗಳಲ್ಲಿ ದೌರ್ಜನ್ಯಕ್ಕೊಳಗಾಗುವ ಮಕ್ಕಳಿಗೆ ಕಾನೂನು ನೆರವು ನೀಡುತ್ತಿದೆ.