ಪಾಕಿಸ್ತಾನದ ಮಾಡೆಲ್ ರೋಮಾ ಮೈಕೆಲ್ ಬಿಕಿನಿ ಧರಿಸಿದ್ದ ಕಾರಣಕ್ಕೆ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ರೋಮಾ ಅಕ್ಟೋಬರ್ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಶನಲ್ 2024 ಸ್ಪರ್ಧೆಯಲ್ಲಿ ಬಿಕಿನಿ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಾಡೆಲ್ ಗೆ ಪಾಕ್ ನಿಂದ ನೇರ ಬೆದರಿಕೆಗಳು ಬರುತ್ತಿವೆ. ಆದರೆ ಅನುಕಂಪದ ಆಧಾರದ ಮೇಲೆ ರೋಮಾಗೆ ಭಾರತವು ಸಾಕಷ್ಟು ಆಫರ್ ಗಳನ್ನು ನೀಡುತ್ತಿದೆ.
ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರೂಪದರ್ಶಿ ರೋಮಾ ಮೈಕೆಲ್ ಹೇಳಿದ್ದಾರೆ. ಇದನ್ನು ನಟಿ ಪಾಡ್ಕಾಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಜಗತ್ತು ತುಂಬಾ ಮುಂದುವರೆದಿದೆ, ಆದರೆ ನೀವು ಪಾಕಿಸ್ತಾನಿಗಳು ಬಹಳ ಹಿಂದೆಯೇ ಹೋಗಿದ್ದೀರಿ, ಪಾಕಿಸ್ತಾನದಲ್ಲಿ ಶಿಕ್ಷಣದ ಕೊರತೆಯಿದೆ. ಬಿಕಿನಿ ಧರಿಸಿದ ಬಳಿಕ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದವು. ಹೀಗಾಗಿ ನನ್ನ ಸ್ನೇಹಿತರು ನಿನಗೆ ಏನಾದರೂ ಕೆಟ್ಟದಾಗಬಹುದು ಪಾಕಿಸ್ತಾನಕ್ಕೆ ಬರಬೇಡ ಎದಿದ್ದರು. ಆ ನಂತರ ನಾನು ತುಂಬಾ ಸಮಯ ಪಾಕಿಸ್ತಾನಕ್ಕೆ ಹೋಗಲಿಲ್ಲ ಎಂದು ರೋಮಾ ಹೇಳಿದ್ದಾರೆ.
ಇನ್ನು ಮುಂದೆ ನನಗೆ ಪಾಕಿಸ್ತಾನದಲ್ಲಿ ಜೀವನ ಕಷ್ಟಕರವಾಗಬಹುದು. ಕೆಲಸವನ್ನು ಸ್ವತಃ ಮಾಡಲು ಕಷ್ಟವಾಗಬಹುದು. ಏಕೆಂದರೆ ಪಾಕಿಸ್ತಾನಿ ನಾಟಕದ (ಮಾಲಿಕಾ) ಆಡಿಷನ್ಗಳನ್ನು ವಿಭಿನ್ನವಾಗಿ ಮಾಡಲಾಗುತ್ತದೆ. ಪಾಕಿಸ್ತಾನದಲ್ಲಿ ನಟಿಯರು ಇಂತಹ ಬಟ್ಟೆ ಧರಿಸುವಂತಿಲ್ಲ. ಸೋಷಿಯಲ್ ಮೀಡಿಯಾದವರು ನನ್ನ ವಿರುದ್ಧ ಅಪಪ್ರಚಾರ ಆರಂಭಿಸಿದರು. ಇದಾದ ನಂತರ ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮತ್ತು ಅಂತಹ ಬಟ್ಟೆಗಳನ್ನು ಧರಿಸುವ ಧೈರ್ಯವನ್ನು ಎಂದು ಪರಿಗಣಿಸಿದರು. ಆದರೆ ನಾನು ಅದನ್ನೆಲ್ಲ ಮೀರಿ ನಡೆದುಕೊಂಡೆ. ಹೀಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದು ನನ್ನ ಬೇಡಿಕೆಯಾಗಿದೆ ಎಂದು ರೋಮಾ ಮೈಕೆಲ್ ಮನವಿ ಮಾಡಿದ್ದಾರೆ.
ಅಲ್ಲದೆ, ಭಾರತಕ್ಕೆ ಬರಲು ಸಾಕಷ್ಟು ಆಫರ್ಗಳಿವೆ. ನನಗೆ ಭಾರತಕ್ಕೆ ಹೋಗಬೇಕೆಂಬ ಆಸೆಯಿದೆ. ಆದರೆ ಸದ್ಯಕ್ಕೆ ನಮ್ಮಿಬ್ಬರ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ಬಾಲಿವುಡ್ನಲ್ಲಿ ಕೆಲಸ ಮಾಡಲು, ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಅವರು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.