ಕೆನಡಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ ಇದೀಗ ಟಿ20 ವಿಶ್ವಕಪ್ನ ಸೂಪರ್ 8 ತಲುಪುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಾಕಿಸ್ತಾನ ತಂಡವು ಸೂಪರ್ 8 ತಲುಪದಿದ್ದರೆ ಅನೇಕ ಆಟಗಾರರನ್ನು ತಂಡದಿಂದ ಕೈಬಿಡಬಹುದು ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪರನ್ನ ಹೆಚ್ಚು ಕೆಣಕಬೇಡಿ.. ಕಾಂಗ್ರೆಸ್ ನಿರ್ನಾಮ ಗ್ಯಾರಂಟಿ – ಬಿಜೆಪಿ
ಇದರೊಂದಿಗೆ ಎರಡನೇ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡಿದ್ದ ಬಾಬರ್ ಆಝಂ ಕಥೆ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಪಿಸಿಬಿ ಬಾಬರ್ ಭವಿಷ್ಯದ ಬಗ್ಗೆ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಕಳಪೆ ಪ್ರದರ್ಶನದ ಹೊರತಾಗಿಯೂ, ಬಾಬರ್ ಆಝಂ ಅವರನ್ನು ನಾಯಕತ್ವದಿಂದ ತೆಗೆದುಹಾಕುವುದಿಲ್ಲ ಎಂದು ವರದಿಯಾಗಿದೆ. ಬಾಬರ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಪಿಸಿಬಿ ನಿರ್ಧರಿಸಿದೆ.
ಮುಂದಿನ ವರ್ಷ ನಡೆಯಲ್ಲಿರುವ ಅಂದರೆ 2025 ರಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿವರೆಗೆ ಬಾಬರ್ ಆಝಂ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿದೆ ಮತ್ತು ಆ ಪಂದ್ಯಾವಳಿಯ ಫಲಿತಾಂಶದ ನಂತರವೇ ಬಾಬರ್ ಅವರನ್ನು ನಾಯಕರಾಗಿ ಮುಂದುವರೆಸಬೇಕೇ? ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ವರದಿಯಾಗಿದೆ.
ಇತ್ತೀಚೆಗೆ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕಿಸ್ತಾನಿ ತಂಡದಲ್ಲಿ ಮೇಜರ್ ಸರ್ಜರಿಯ ಅವಶ್ಯಕತೆ ಇದೆ ಎಂದಿದ್ದರು. ಈ ಮೂಲಕ ಟಿ20 ವಿಶ್ವಕಪ್ನಿಂದ ಪಾಕ್ ತಂಡ ಹೊರಬಿದ್ದ ನಂತರ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬ ಸುಳಿವು ನೀಡಿದ್ದರು.