ಪಾಟ್ನಾ:- ಟ್ಯೂಷನ್ನಿಂದ ಬರುತ್ತಿದ್ದ ಹುಡುಗಿಗೆ ಪಾಗಲ್ ಪ್ರೇಮಿ ಗುಂಡು ಹೊಡೆದ ಕೊಂದ ಘಟನೆ ಜರುಗಿದೆ.
ಬಿಹಾರದ ಗ್ರಾಮೀಣ ಪಾಟ್ನಾದಲ್ಲಿ ನಡೆದಿದೆ. ಫಲಿಸದ ಪ್ರೇಮವೇ ಈ ಘಟನೆಗೆ ಕಾರಣ ಎಂದು ಪಾಟ್ನಾ ಗ್ರಾಮೀಣ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಈ ಇಡೀ ಅಪರಾಧದ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತಳನ್ನು 12ನೇ ತರಗತಿ ವಿದ್ಯಾರ್ಥಿನಿ ಅನಾಮಿಕಾ ಕುಮಾರಿ ಎಂದು ಗುರುತಿಸಲಾಗಿದೆ. ಅವಳು ತನ್ನ ತಾಯಿಯ ಅಜ್ಜಿಯೊಂದಿಗೆ ಮಸೌರ್ಹಿಯ ಕಾಜಿಚಕ್ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಅನಾಮಿಕಾ ಕುಮಾರಿಯನ್ನು ಆರೋಪಿ ಪ್ರೇಮಿಸುತ್ತಿದ್ದ. ಆದರೆ, ಹುಡುಗಿಗೆ ಇಷ್ಟವಿರಲ್ಲ. ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಅನಾಮಿಕಾ ತನ್ನ ಟ್ಯೂಷನ್ಗೆ ಹೋಗುತ್ತಿದ್ದಾಗ ಆರೋಪಿ ಪೊಲೀಸ್ ಠಾಣೆಯಿಂದ 500 ಮೀಟರ್ ದೂರದಲ್ಲಿರುವ ಮಾಣಿಕ್ಚಂದ್ ಮೋರ್ ಬಳಿ ಪಾಯಿಂಟ್-ಬ್ಲಾಂಕ್ ರೇಂಜ್ನಲ್ಲಿ ಗುಂಡು ಹಾರಿಸಿದ್ದಾನೆ. ಆಕೆ ಕುಸಿದ ಬಿದ್ದು ಕೊಡಲೇ ಮತ್ತೊಮ್ಮೆ ಆಕೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.