ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತ ಗಾಯಕಿ ಶಾರದಾ ಸಿನ್ಹಾ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಾರದಾ ಅವರು ಇಹಲೋಕ ತ್ಯಜಿಸಿದ್ದು ಅವರಿಗೆ 72 ವರ್ಷ ವಯಸ್ಸಾಗಿತ್ತು. ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾರದಾ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಗಾಯಕಿ ಶಾರದಾ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.
‘ಕೇಲ್ವಾ ಕೆ ಪಾತ್ ಪರ್…’, ‘ಸುನಾ ಛಾತಿ ಮೈ’ ಮುಂತಾದ ಹಲವು ಹಿಟ್ ಹಾಡುಗಳನ್ನು ಹಾಡಿದ್ದರು. ಶಾರದಾ ಸಿನ್ಹಾ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ರು. ತನ್ನ ತಾಯಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಗಾಯಕನ ಮಗ ಅಂಶುಮಾನ್ ಸಿನ್ಹಾ ಹೇಳಿದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಅಂಶುಮನ್ ಸಿನ್ಹಾ ಅವರಿಗೆ ಕರೆ ಮಾಡಿ ಶಾರದಾ ಅವರ ಆರೋಗ್ಯ ಸ್ಥಿತಿಗತಿ ವಿಚಾರಿಸಿದ್ದರು.
ಬಿಹಾರದ ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ಅವರು ತಮ್ಮ ಸುಮಧುರ ಕಂಠದಿಂದ ಮೈಥಿಲಿ ಮತ್ತು ಭೋಜ್ಪುರಿ ಸಂಗೀತಕ್ಕೆ ವಿಶಿಷ್ಟವಾದ ಗುರುತನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಶಾರದಾ ಇಲ್ಲದೆ ಛತ್ ಪೂಜಾ ಹಾಡುಗಳು ಅಪೂರ್ಣವೆನ್ನುತ್ತಿದ್ದಾರೆ. ಶಾರದಾ ಅವರ ಸಾಧನೆ ಗುರುತಿಸಿದ ಸರ್ಕಾರ ‘ಪದ್ಮಶ್ರೀ’ ಮತ್ತು ‘ಪದ್ಮಭೂಷಣ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು.
2016 ರಲ್ಲಿ ಶಾರದಾ ಅವರಿಗೆ ‘ಸುಪಾವೋ ನಾ ಮೈಲೇ ಮೈ’ ಮತ್ತು ‘ಪಹಿಲೆ ಪಹಿಲೆ ಛಾತಿ ಮೈಯಾ’ ನಂತಹ ಎರಡು ಹೊಸ ಛತ್ ಹಾಡುಗಳನ್ನು ನೀಡಲಾಯಿತು. ಶಾರದಾ ಅವರು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ 1991 ರಲ್ಲಿ ‘ಪದ್ಮಶ್ರೀ’ ಮತ್ತು 2018 ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿಗಳನ್ನು ಪಡೆದರು. ಆಕೆಯನ್ನು ಬಿಹಾರ ಕೋಗಿಲೆ ಎಂದೂ ಕರೆಯುತ್ತಿದ್ದರು.