ಬೆಂಗಳೂರು:– 2024 ರ ಹೊಸ ವರ್ಷದಂದು ಸಾಕಷ್ಟು ಮಂದಿ ಪಬ್, ಹೊಟೇಲ್, ಪಾರ್ಟಿ ಅಂತ ಎಂಜಾಯ್ ಮಾಡಿದ್ರು. ಅದರಲ್ಲಿಯೂ ಹೋಟೆಲ್, ಲಾಡ್ಜ್ಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದು ಸಾಮಾನ್ಯವಾಗಿತ್ತು. ಈ ನಡುವೆ,ಬೆಂಗಳೂರಿನಲ್ಲಿ ಓಯೋ ಬುಕ್ಕಿಂಗ್ ನಲ್ಲಿ ಕೂಡಾ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ ಎಂದು ತಿಳಿದುಬಂದಿದೆ.
2023ರ ಹೊಸ ವರ್ಷದ ಮೊದಲ ದಿನ ಓಯೋ ರೂಮ್ಗಳ ಬುಕಿಂಗ್ ಶೇಕಡಾ 37ರಿಂದ 6.2 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಡಿಸೆಂಬರ್ 30 ಮತ್ತು 31ರ ನಡುವೆ ಕೊನೆಯ ನಿಮಿಷದಲ್ಲಿ 2.3 ಲಕ್ಷ ಬುಕ್ಕಿಂಗ್ಗಳು ಆಗಿವೆ. ಅದರಲ್ಲೂ ದೇಶದ ಕೆಲವು ಯಾತ್ರಾ ಸ್ಥಳಗಳಲ್ಲಿ ಹೆಚ್ಚು ಹೋಟೆಲ್ ರೂಂ ಬುಕ್ಕಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆಯಲ್ಲಿ ಬುಕಿಂಗ್ನಲ್ಲಿ ಶೇಕಡಾ 70ರಷ್ಟು ಏರಿಕೆ ಕಂಡಿದೆ. ಗೋವಾದಲ್ಲಿ ಶೇಕಡಾ 50ರಷ್ಟು ಮತ್ತು ನೈನಿತಾಲ್ನಲ್ಲಿ ಶೇಕಡಾ 60ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಓಯೋ ಬುಕ್ಕಿಂಗ್ ಪ್ರಮಾಣ, ಹಿಂದಿನ ವರ್ಷಕ್ಕೆ ಹೋಲಿಸಿದರೆ 37 ಶೇಕಡಾ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.
ಹೊಸ ವರ್ಷದ ಸಂಭ್ರಮಾಚರಣೆಯ ಜೊತೆಗೆ ಕಾಂಡೋಮ್ಗಳಿಗಾಗಿ ಆನ್ಲೈನ್ ಆರ್ಡರ್ಗಳ ಸಂಖ್ಯೆ ಹೆಚ್ಚಿದೆ. swiggy Instamartನಲ್ಲಿ ಪ್ರತಿ ಗಂಟೆಗೆ 1,722 ಯೂನಿಟ್ ಕಾಂಡೋಮ್ಗಳನ್ನು ಆರ್ಡರ್ ಮಾಡಲಾಗಿರುವುದು ಬಯಲಾಗಿದೆ. ಮಾತ್ರವಲ್ಲ, ಸ್ವಿಗ್ಗಿ ಇನ್ಸ್ಟಾಮಾರ್ಟ್ ಮೂಲಕ ಎರಡು ಲಕ್ಷ ಕಿಲೋ ಈರುಳ್ಳಿ ಮತ್ತು 1.80 ಲಕ್ಷ ಕಿಲೋ ಆಲೂಗಡ್ಡೆ ಆರ್ಡರ್ ಮಾಡಿದ್ದಾರಂತೆ. ಇದನ್ನು ಹೊರತುಪಡಿಸಿ, ಮಿಕ್ಸರ್ಗಳು ಮತ್ತು ಗ್ಲಾಸ್ಗಳು ಸೇರಿದಂತೆ ಇನ್ನಿತರ ಐಟಂಗಳ ಹುಡುಕಾಟ ಹತ್ತು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. 1.04 ಲಕ್ಷ ಜನರು ಇತರರಿಗೆ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.