ಕೆನರಾ ಬ್ಯಾಂಕಿನಲ್ಲಿ ಇದೀಗ 3000ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಪದವೀಧರ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತಿ ಮತ್ತು ಅರ್ಹತೆಯುಳ್ಳಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮುಂದಾಗಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ಸಂಪೂರ್ಣವಾದ ಮಾಹಿತಿಯನ್ನು ಇದೇ ಲೇಖನದಲ್ಲಿ ತಿಳಿದುಕೊಳ್ಳುತ್ತೀರಾ.
ಈ ಕೆನರಾ ಬ್ಯಾಂಕಿನ ಅಪ್ರೆಂಟಿಸ್ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿದರೆ ಎಷ್ಟು ಸಂಬಳ ಸಿಗುತ್ತದೆ? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ ಅರ್ಹತೆಗಳನ್ನು ಹೊಂದಿರಬೇಕು? ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ಕೆಳಗಡೆ ಸೂಕ್ತವಾದ ಉತ್ತರಗಳೊಂದಿಗೆ ತಿಳಿಸಲಾಗಿರುತ್ತದೆ ನೋಡಿ.
ಇಲಾಖೆಯ ಹೆಸರು | ಕೆನರಾ ಬ್ಯಾಂಕ್ |
ಹುದ್ದೆಗಳ ಹೆಸರು | ಅಪ್ರೆಂಟಿಸ್ |
ಉದ್ಯೋಗ ಸ್ಥಳ | ಭಾರತ ದೇಶದಾದ್ಯಂತ |
ಖಾಲಿ ಹುದ್ದೆಗಳು | 3,000 ಖಾಲಿ ಹುದ್ದೆಗಳು |
ಸಂಬಳ | ₹15,000/- ಪ್ರತಿ ತಿಂಗಳಿಗೆ |
ಅರ್ಜಿ ಸಲ್ಲಿಕೆ ಪ್ರಾರಂಭ | 24/09/2024 |
ಅರ್ಜಿ ಸಲ್ಲಿಕೆ ಮುಕ್ತಾಯ | 04/10/2024 |
ಅಧಿಕೃತ ಜಾಲತಾಣ | https://www.canarabank.com/ |
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ಮುಖ್ಯವಾದ ವಿವರಗಳನ್ನು ಈ ಮೇಲೆ ಕೋಷ್ಟಕದಲ್ಲಿ ನೀಡಲಾಗಿರುತ್ತದೆ. ಅವುಗಳನ್ನು ಸಂಪೂರ್ಣವಾಗಿ ಓದಿಕೊಂಡು ಗಮನದಲ್ಲಿಟ್ಟುಕೊಂಡು ನಂತರ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ, ಯಾವುದಾದರೂ ಭಾರತೀಯ ಅನುಮೋದಿತ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಹೋಲಿಸಬಹುದಾಗಿರುವಂತಹ ಪ್ರಮಾಣೀಕರಣ ಅಥವಾ ಪದವಿಯನ್ನು ಪೂರ್ಣಗೊಳಿಸಿರಬೇಕು ಎಂದು ತಿಳಿಸಲಾಗಿದೆ.
ವಯೋಮಿತಿ:
ನೀವೇನಾದರೂ ಈ ಕೆನರಾ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಕನಿಷ್ಠ ವಯೋಮಿತಿಯು 20 ವರ್ಷಗಳು ಆಗಿರುತ್ತವೆ. ಮತ್ತು 28 ವರ್ಷಗಳನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿ ಮೀರಿರಬಾರದು ಎಂದು ತಿಳಿಸಲಾಗಿದೆ. SC,ST ಅರ್ಜಿದಾರ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಲಿಕೆಯನ್ನು ನೀಡಲಾಗಿದೆ. OBC ವರ್ಗದವರಿಗೆ 3 ವರ್ಷಗಳ ವಯೋಮಿತಿ ಸಡಲಿಕೆ. PwBD (SC, ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಲಿಕೆ. PwBD (OBC) ಅಭ್ಯರ್ಥಿಗಳಿಗೆ 13 ವರ್ಷಗಳ ವಯೋಮಿತಿ ಸಡಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
- ಸಾಮಾನ್ಯ, OBC, EWS ಅಭ್ಯರ್ಥಿಗಳಿಗೆ = ₹500
- SC,ST, ಮಹಿಳಾ ಅಭ್ಯರ್ಥಿಗಳಿಗೆ = ಇಲ್ಲಾ
- PwBD ಅಭ್ಯರ್ಥಿಗಳಿಗೆ = ಇಲ್ಲಾ
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ 12ನೇ ತರಗತಿ ಅಥವಾ ಡಿಪ್ಲೋಮಾ ಶೇಕಡವಾರು ಅಥವಾ ಅಂಗಗಳನ್ನು ಬಳಸಿಕೊಂಡು ರಾಜ್ಯದಿಂದ ಆಯೋಜಿಸಲಾಗಿರುವ ಮೆರಿಟ್ ಪಟ್ಟಿಯ ನೋಡಿಕೊಂಡು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಡಾಕ್ಯುಮೆಂಟ್ ಪರಿಶೀಲನೆಯ ನಂತರವೂ ಕೂಡ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಜಾಲತಾಣದ ಲಿಂಕನ್ನು ಕೆಳಗಡೆ ನೀಡಲಾಗಿರುತ್ತದೆ ಅದನ್ನು ಬಳಸಿಕೊಂಡು ನೀವು ಈ ಹುದ್ದೆಗಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನಿಮಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಿಳಿಯದೆದ್ದಲ್ಲಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.