ರಾಮನಗರ:-ದರ್ಗಾದಲ್ಲಿ ಪ್ರಸಾದ ಎಂದು ನೀಡಿದ ಸಿಹಿ ಪದಾರ್ಥ ತಿಂದು ೨೦ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಮನಗರದ ಎಂ.ಜಿ.ರಸ್ತೆಯಲ್ಲಿರುವ ಪಿಎಸ್ವಿ ದರ್ಗಾದಲ್ಲಿ ಜರುಗಿದೆ.
ದರ್ಗಾದಲ್ಲಿ ನಡೆಯುತ್ತಿದ್ದ ಗಂಧಮಹೋತ್ಸವದ ವೇಳೆ ಸಿಹಿ ಹಂಚಿಕೆ ಮಾಡಲಾಗಿತ್ತು. ಈ ಸಿಹಿಯನ್ನು ೭೦ಕ್ಕೂ ಹೆಚ್ಚು ಮಂದಿ ಸೇವನೆ ಮಾಡಿದರು. ಕೂಡಲೇ ಸಿಹಿ ತಿಂದಿದ್ದ ವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಕೂಡಲೇ ವಾಂತಿಮಾಡಿಕೊಂಡು ೨೦ ಮಂದಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಕೂಡಲೇ ವಿಷಯ ತಿಳಿದ ಅಧಿಕಾರಿಗಳು, ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.