ಬೆಂಗಳೂರು: ನಮ್ಮ ರಾಜ್ಯ ಯಾವತ್ತಿಗೂ ಕೂಡ SM ಕೃಷ್ಣ ಅವರಿಗೆ ಚಿರಋಣಿಯಾಗಿರಬೇಕು ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಎಸ್ಎಂ ಕೃಷ್ಣ ಅವರು ಕರ್ನಾಟಕಕ್ಕೆ ಐಟಿ-ಬಿಟಿ ದೃಷ್ಟಿಯಲ್ಲಿ ಒಂದು ದಿಕ್ಕು ದೆಸೆಯನ್ನು ತೋರಿದವರು, ಹೀಗಾಗಿ ನಮ್ಮ ರಾಜ್ಯ ಯಾವತ್ತಿಗೂ ಕೂಡ ಅವರಿಗೆ ಚಿರಋಣಿಯಾಗಿರಬೇಕು.
ಭೂದಾಖಲೆಗಳ ಡಿಜಿಟಲೀಕರಣದ ಮೂಲ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಲಿಕ್ಕರ್ ಲಾಬಿ ಮಾಫಿಯಾ ತಡೆಗೆ ಶ್ರಮಪಟ್ಟವರು. ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದವರು. ಎಸ್ಎಂಕೆ ಅವರಿಂದಲೇ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಇನ್ಫೋಸಿಸ್ ಟ್ರೈನಿಂಗ್ ಸೆಂಟರ್ ಪ್ರಾರಂಭವಾಯಿತು. ಜೊತೆಗೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.
Chanakya Niti: ಗಂಡ-ಹೆಂಡತಿ ಮಧ್ಯೆ ಇಷ್ಟೆಲ್ಲಾ ವಯಸ್ಸಿನ ಅಂತರ ಇದ್ರೆ ಸಂಸಾರ ಹಾಳಾಗುತ್ತಂತೆ!
ದೇಶದ ಅತ್ಯಂತ ಸಂಪದ್ಭರಿತ ಮತ್ತು ಜಿಡಿಪಿ ಬೆಳವಣಿಗೆ ವಿಚಾರದಲ್ಲಿ ಪ್ರತಿ ವರ್ಷ 2 ಅಥವಾ 3ನೇ ಸ್ಥಾನದಲ್ಲಿ ಬರುತ್ತದೆ. ಜೊತೆಗೆ ರಾಜ್ಯದ ಆದಾಯದ ಪೈಕಿ ಶೇ.56-57ರಷ್ಟು ಬೆಂಗಳೂರಿನಿಂದ ಬರುತ್ತದೆ. ಕರ್ನಾಟಕದ ಪಾಲಿಗೆ ಬೆಂಗಳೂರು ಕಾಮಧೇನು ಇದ್ದಂತೆ. ಇದಕ್ಕೆ ಎಸ್ಎಂಕೆ ಅವರ ಕೊಡುಗೆ ಸಾಕಷ್ಟಿದೆ. ಒಬ್ಬ ಒಳ್ಳೆಯ ಮುಖ್ಯಮಂತ್ರಿಯಾಗಿ, ಒಳ್ಳೆಯ ಆಡಳಿತವನ್ನು ನೀಡಿದ್ದರು. ಎಸ್.ಎಂ ಕೃಷ್ಣ ಅವರು ನನ್ನ ಒಬ್ಬ ಇಷ್ಟದ ಸಿಎಂ ಆಗಿದ್ದರು ಎಂದು ಸ್ಮರಿಸಿದರು.
ಯಾವ ಊರಿಗೆ ಹೋದರೂ ಅವರ ಕೊಡುಗೆ ಇದೆ. ಅಮೂಲಾಗ್ರ ಬದಲಾವಣೆಗಾಗಿ ಹೊರಟವರು. ಬೆಂಗಳೂರಿನಲ್ಲಿ 6,500 ಐಟಿ 92 ಬಿಟಿ ಕಂಪನಿಗಳ ಸ್ಥಾಪನೆಗೆ ಮೂಲ ಕಾರಣೀಕರ್ತರು. ಹೀಗಾಗಿ ಪಕ್ಷಾತೀತವಾಗಿ ಎಲ್ಲರೂ ಗೌರವಿಸುವಂತಹ ವ್ಯಕ್ತಿತ್ವ ಅವರದ್ದು. ಸಭ್ಯತೆಯ ಗೆರೆಯನ್ನು ದಾಟದೇ ಬೆಳೆದು, ಅಳೆದು ತೂಗಿ ಮಾತನಾಡಿದವರು. ರಾಜ್ಯಕ್ಕೆ ಮಾದರಿಯಾಗಿದ್ದ ಸಿಎಂ ಆಗಿ ಅಭಿವೃದ್ಧಿಯೇ ಮೂಲ ಗುರಿಯಾಗಿ ಮುನ್ನಡೆದವರು ಎಂದು ಹೇಳಿದರು.