ಟಾಲಿವುಡ್ ನಟ ನಾಗಚೈತನ್ಯ ಹಾಗೂ ಸಮಂತ ದೂರ ದೂರವಾಗಿ ಕೆಲ ವರ್ಷಗಳೆ ಕಳೆದಿದೆ. ಸದ್ಯ ನಾಗಚೈತನ್ಯ ಶೋಭಿತಾ ಜೊತೆ ಎರಡನೇ ಮದುವೆಯಾಗಿದ್ದಾರೆ. ಇದೀಗ ‘ತಾಂಡೇಲ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾಗಚೈತನ್ಯ ಸಂದರ್ಶನವೊಂದರಲ್ಲಿ ಸಮಂತಾ ಜೊತೆಗಿನ ದಾಂಪತ್ಯ ಜೀವನ ಅಂತ್ಯವಾಗಿದ್ದೇಕೆ? ಎಂದು ಹೇಳಿಕೊಂಡಿದ್ದಾರೆ.
ನಾಗಚೈತನ್ಯ ಸಂದರ್ಶನವೊಂದರಲ್ಲಿ ಮಾತನಾಡಿ, ನಾವು ನಮ್ಮದೇ ಕಾರಣಗಳಿಂದ ನಾವು ದೂರ ಆಗಲು ನಿರ್ಧರಿಸಿದೆವು. ನಮ್ಮ ಈ ನಿರ್ಧಾರವನ್ನು ಪರಸ್ಪರ ಗೌರವಿಸುತ್ತೇವೆ. ನಾವು ಬೇರೆ ಆಗಿ ನಮ್ಮ ಜೀವನದಲ್ಲಿ ನಾವು ಮುಂದುವರೆಯುತ್ತಿದ್ದೇವೆ. ಹೀಗಿದ್ರೂ ಮತ್ತೆ ಯಾಕೆ ವಿವರಣೆ ನೀಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಜನರು ಮತ್ತು ಮಾಧ್ಯಮದವರು ನಮ್ಮ ನಿರ್ಧಾರವನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. ನಮ್ಮ ವೈಯಕ್ತಿಕ ಜೀವನವನ್ನು ಗೌರವಿಸಿ. ನಮ್ಮ ವಿಚಾರ ಕೆಲವರಿಗೆ ಮನರಂಜನೆ ಆಗಿದೆ ಎಂದು ಖಾರವಾಗಿ ಹೇಳಿದ್ದಾರೆ.
ನಾವು ನಮ್ಮದೇ ಆದ ಜೀವನ ನಡೆಸುತ್ತಿದ್ದೇವೆ. ಜೀವನದಲ್ಲಿ ನಾನು ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ನಾನು ಹಾಗೂ ಶೋಭಿತಾ ಖುಷಿಯಾಗಿದ್ದೇವೆ. ಇಬ್ಬರೂ ಪರಸ್ಪರ ಗೌರವಿಸುತ್ತೇವೆ. ಡಿವೋರ್ಸ್ ಪಡೆಯೋದು ಸೆನ್ಸಿಟಿವ್ ವಿಚಾರ. ನಾನು ಕೂಡ ಒಡೆದು ಹೋದ ಕುಟುಂಬದಿಂದ ಬಂದವನು. ಆ ನೋವು ಏನು ಎಂಬುದು ನನಗೆ ಗೊತ್ತು. ಹಾಗಾಗಿ ಸಮಂತಾಗೆ ಡಿವೋರ್ಸ್ ಕೊಡುವಾಗ ಸಾವಿರ ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಇಬ್ಬರು ಒಮ್ಮತದಿಂದಲೇ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ ನಾಗಚೈತನ್ಯ.