ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸಂಪೂರ್ಣ ಹಸಿರುಮಯ, ಇಟ್ಟಿಗೆ ಗೋಡೆಗಳು ಹಾಗೂ ಕೃತಕ ಜಲಪಾತದಿಂದ ತುಂಬಿರುವ ಟರ್ಮಿನಲ್, ಒಂದು ವಿಶಾಲವಾದ ಒಳಾಂಗಣ ಉದ್ಯಾನವನ್ನೇ ಹೊಂದಿದೆ. ಹಾಗೆಯೇ ಮೇಲ್ಭಾಗದಲ್ಲಿಗಂಟೆಯೊಳಗಿರುವ ಸಸ್ಯಗಳು ಸಹ ಟರ್ಮಿನಲ್ನ ಅನನ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.ಅಂತಾದ್ದೆ ಸೌಂದರ್ಯವನ್ನು ನಮ್ಮ ಮೆಟ್ರೋದಲ್ಲಿ ನಿರ್ಮಾಣ ಮಾಡಲು ಇದೀಗ ಬಿಎಂಆರ್ ಸಿ ಎಲ್ ಮುಂದಾಗಿದೆ.. ಹಾಗಾದ್ರೆ ಈಗಾಗಲೇ ನಮ್ಮ ಮೆಟ್ರೋ ಏನೆಲ್ಲ ಪ್ಲಾನ್ ಮಾಡ್ಕೊಂಡಿದೆ ಅನ್ನೋದನ್ನ ನೋಡೋಣ ಬನ್ನಿ…….
ಶಕ್ತಿ ಯೋಜನೆಯಡಿ ಸರ್ಕಾರ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ ಹಣ ಕೊಡಬೇಕು: ರಾಮಲಿಂಗಾ ರೆಡ್ಡಿ
ಹೌದು, ಕೆಂಪೇಗೌಡ ವಿಮಾನ ನಿಲ್ದಾಣ ಟರ್ಮಿನಲ್ಅನ್ನು ನಾಲ್ಕು ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಉದ್ಯಾನದಲ್ಲಿ ಟರ್ಮಿನಲ್, ಪರಿಸರದ ಸುಸ್ಥಿರತೆ, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಆಚರಣೆಯನ್ನು ಈ ಟರ್ಮಿನಲ್ನಲ್ಲಿ ಪ್ರತಿಬಿಂಬಿಸಲಾಗಿದೆ. ಅಷ್ಟೇ ಅಲ್ಲದೆ, ಟರ್ಮಿನಲ್ ಸಂಪೂರ್ಣವಾಗಿ ಸಂಸ್ಕರಿಸಿದ ಬಿದಿರಿನಿಂದ ಅಲಂಕೃತಗೊಂಡಿದ್ದು ನೋಡುವುದಕ್ಕೆ ಸ್ವರ್ಗಲೋಕವೇ ಧರೆಗಿಳಿದು ಬಂದಿದೆ ಅನ್ನೋ ತರ ಇದೆ..ಇದೀಗ ವಿಮಾನ ನಿಲ್ದಾಣ ರೀತಿಯಲ್ಲೇ ನಮ್ಮ ಮೆಟ್ರೋ ತನ್ನ ಕಾರ್ಯದಲ್ಲಿ ಹಲವು ರೀತಿಯ ಹೊಸ ತನಗಳನ್ನು ಮೈಗೂಡಿಸಿಕೊಂಡು ಬರುತ್ತಿದೆ. ಇದೀಗ ನಮ್ಮ ಮೆಟ್ರೋ ಮತ್ತೊಂದು ಮಹತ್ವದ ನಿರ್ಧಾರ ಕೈ ಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಹೊಸ ಥೀಮ್ನಲ್ಲಿ ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣವನ್ನು ರಚಿಸಲು ಪ್ಲ್ಯಾನ್ ನಡೆಯುತ್ತಿದೆ….
ಇದೊಂದು ವಿಭಿನ್ನ ಪ್ರಯೋಗಕ್ಕೆ ಬಿಎಂಆರ್ಸಿಎಲ್ ಮುಂದಾಗಿದೆ. ಇದಕ್ಕೆ ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಮಾಜಿ ಪ್ರಧನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್, ಬಿಎಂಆರ್ಸಿಎಲ್ ಸಂಪರ್ಕಿಸಿದ್ದು, ಸಂಸ್ಥೆ ಹಸಿರು ನಿಶಾನೆ ನೀಡಿದೆ ಎಂದು ತಿಳಿದು ಬಂದಿದೆ. ನಿಲ್ದಾಣದಲ್ಲಿ ಹೆಚ್ಚಾಗಿ ಬಿದುರನ್ನೇ ಬಳಸಿಲು ತೀರ್ಮಾನಿಸಲಾಗಿದೆ. ಈ ಮೂಲಕ ಭಾರತದ ಮೊಟ್ಟ ಮೊದಲ ಬಿದುರು ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ…..
.ಈ ನಿಲ್ದಾಣವೂ ಸಂಪೂರ್ಣ ಬಿದಿರು ಆಧಾರಿತ ವಿನ್ಯಾಸಗಳು, ರಚನೆಗಳು ಮತ್ತು ಒಳಾಂಗಣಗಳನ್ನು ಒಳಗೊಂಡಿರುತ್ತದೆ, ಈ ಮೂಲಕ ಪರಿಸರ ಜಾಗೃತಿಯನ್ನು ಉತ್ತೇಜಿಸುತ್ತದೆ ಮತ್ತು ನಗರ ಸ್ಥಳಗಳಲ್ಲಿ ನೈಸರ್ಗಿಕ ವಸ್ತುಗಳ ಸೌಂದರ್ಯದ ಆಕರ್ಷಣೆಯನ್ನು ಪ್ರದರ್ಶಿಸುತ್ತದೆ. ಇದರೊಂದಿಗೆ ಬಿದಿರಿನ ಥೀಮ್ನಲ್ಲಿ ನಿರ್ಮಿಸಲಾಗುತ್ತಿರುವ ಬ್ಯಾಂಬೂ ಬಜಾರ್ ಮೆಟ್ರೋ ನಿಲ್ದಾಣವು ಸಂಪೂರ್ಣವಾಗಿ ಬಿದಿರಿನಿಂದ ಮಾಡಲ್ಪಟ್ಟ ದೇಶದ ಮೊದಲ ಮೆಟ್ರೋ ನಿಲ್ದಾಣವಾಗಲಿದೆ. ಕೆಲವೇ ತಿಂಗಳಲ್ಲಿ ನಿಲ್ದಾಣದ ಕಾಮಗಾರಿ ಆರಂಭವಾಗಲಿದ್ದು, 5-6 ಕೋಟಿ ರೂ. ಬಿದಿರನ್ನು ಪ್ರಾಥಮಿಕ ನಿರ್ಮಾಣ ವಸ್ತುವಾಗಿ ಪ್ರದರ್ಶಿಸಲಾಗುತ್ತದೆ. ಬಿದಿರು ತನ್ನ ಸುಸ್ಥಿರತೆ, ವೇಗದ ಬೆಳವಣಿಗೆ ಹೆಸರುವಾಸಿ. ಬ್ಯಾಂಬೂ ಸೋಸೈಟಿ ಆಫ್ ಇಂಡಿಯಾ ಸಹಯೋಗದಲ್ಲಿ BMRCL ಕೈಗೊಂಡಿರುವ ಈ ನವೀನ ಯೋಜನೆ ಪರಿಸರ ಜಾಗೃತಿ ಹೆಚ್ಚಿಸಲು ಮತ್ತು ಬಾಂಬುವಿನ ಸೌಂದರ್ಯವನ್ನು ಪ್ರದರ್ಶಿಸಲು ಮುಂದಾಗಿದೆ…
ಒಟ್ಟಾರೆಯಾಗಿ ಬ್ರಾಂಡ್ ಬೆಂಗಳೂರು ಕನಸಿಗೆ ತಕ್ಕಂತೆ ಇದೀಗ ನಮ್ಮ ಮೆಟ್ರೋ ಕೂಡ ಸಿಂಗಾರಕ್ಕೆ ರೆಡಿಯಾಗಿದ್ದು, ಇನ್ನು ಈ ನಿಲ್ದಾಣ ದಿಂದ ಬೆಂಗಳೂರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ…