ಬೆಂಗಳೂರು:- ಬೆಂಗಳೂರಿನ ಜೀವನಾಡಿಯಾಗಿದ್ದ ನಮ್ಮ ಮೆಟ್ರೋ ಇದೀಗ ಟಿಕೆಟ್ ದರ ದಿಢೀರ್ ಏರಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಈ ದರ ಏರಿಕೆ ಬಗ್ಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ
ಕರ್ನಾಟಕದಲ್ಲಿ ಹಸುಗಳನ್ನ ಕಾಡ್ತಾ ಇದೆ ಮಾರಣಾಂತಿಕ ಕಾಯಿಲೆ: ರೈತರು ಕಂಗಾಲು!
ಬಿಎಂಆರ್ಸಿಎಲ್ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೊಳಿಸಿದೆ. ಟೋಕನ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 50% ರಷ್ಟು ದರ ಹೆಚ್ಚಳವಾದ್ರೆ, ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 45% ರಷ್ಟು ಹೆಚ್ಚಳವಾಗಲಿದೆ. ಈ ಬಗ್ಗೆ BMRCL ಮಾಹಿತಿ ಕೊಟ್ಟಿದೆ.
ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. 0 ಯಿಂದ 2 ಕಿಲೋ ಮೀಟರ್ವರೆಗಿನ ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಇದ್ದ 10ರೂಪಾಯಿಯೇ ಮುಂದುವರಿಯಲಿದೆ. 2 ರಿಂದ 40 ಕಿಲೋ ಮೀಟರ್ಗೆ ಹಿಂದೆ 15 ರೂಪಾಯಿ ಇದ್ದ ದರ ಇದೀಗ 20 ರೂ. ಆಗಿದೆ. 4ರಿಂದ 6 ಕಿಲೋ ಮೀಟರ್ಗೆ 25 ಇದ್ದ ದರ 30ಕ್ಕೆ ಏರಿಕೆಯಾಗಿದೆ. 6 ರಿಂದ 8 ಕಿಲೋ ಮೀಟರ್ಗೆ ಹಿಂದೆ 30 ಇದ್ದದ್ದು, ಇದೀಗ 40ರೂಪಾಯಿ ಆಗಿದೆ. 8 ರಿಂದ 10 ಕಿಲೋ ಮೀಟರ್ ಪ್ರಯಾಣಿಸುವವರಿಗೆ 40 ರೂಪಾಯಿ ಇದ್ದ ಟಿಕೆಟ್ ದರ 50ಕ್ಕೆ ತಲುಪಿದೆ.
10 ರಿಂದ 15 ಕಿಲೋ ಮೀಟರ್ಗೆ 45 ರೂಪಾಯಿ ಪಾವತಿಸ್ತಿದ್ದವರು ಇದೀಗ 60 ರೂಪಾಯಿ ಪೇ ಮಾಡ್ಬೇಕಿದೆ. 15 ರಿಂದ 20 ಕಿಲೋ ಮೀಟರ್ಗೆ 50 ರೂಪಾಯಿಗೆ ಸಿಗ್ತಿದ್ದ ಟಿಕೆಟ್ 70 ರೂಪಾಯಿಗೆ ಕೊಂಡುಕೊಳ್ಳಬೇಕಿದೆ. 20 ರಿಂದ 25 ಕಿಲೋ ಮೀಟರ್ನ ಹೊಸ ದರ 80 ರೂಪಾಯಿ ಆದ್ರೆ, ಹಳೇ ದರ 60 ರೂಪಾಯಿ ಇತ್ತು. 25 ರಿಂದ 30 ಕಿಲೋ ಮೀಟರ್ ಪ್ರಯಾಣಕ್ಕೆ 60ರೂಪಾಯಿ ಇದ್ದದ್ದು ಇದೀಗ 90 ರೂಪಾಯಿಗೆ ಏರಿಕೆಯಾಗಿದೆ.
ಎಲ್ಲಿಂದ ಎಲ್ಲಿಗೆ ಎಷ್ಟು ರೂಪಾಯಿ?
ವೈಟ್ ಫೀಲ್ಡ್ To ಚಲ್ಲಘಟ್ಟ- 60ರೂ. ರಿಂದ 90ರೂ.ಗೆ ಏರಿಕೆ ಮಾದಾವರ To ರೇಷ್ಮೆ ಸಂಸ್ಥೆ- 60ರಿಂದ 90 ಕ್ಕೆ ಏರಿಕೆ ಸ್ಮಾರ್ಟ್ ಕಾರ್ಡ್ ಮಿನಿಮಮ್ ಬ್ಯಾಲೆನ್ಸ್ 50 ರಿಂದ 90ಕ್ಕೆ ಏರಿಕೆ ಸ್ಮಾರ್ಟ್ ಕಾರ್ಡ್ಗಳಿಗೆ ಶೇ.5ರಷ್ಟು ರಿಯಾಯಿತಿ ಮುಂದುವರಿಕೆ ಒಂದು ದಿನದ ಮೆಟ್ರೋ ಟ್ರೈನ್ ಕಾರ್ಡ್ 200 ರಿಂದ 300ಕ್ಕೆ ಏರಿಕೆ 3 ದಿನಗಳ ಮೆಟ್ರೋ ಟ್ರೈನ್ ಕಾರ್ಡ್ ಗೆ 400ರಿಂದ 600 ಕ್ಕೆ ಏರಿಕೆ 5 ದಿನಗಳ ಮೆಟ್ರೋ ಟ್ರೈನ್ ಕಾರ್ಡ್ ಗೆ 600 ರಿಂದ 800ಕ್ಕೆ ಏರಿಕೆ
ಮೆಟ್ರೋ ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. ನಾನು ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ. ದರ ಏರಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.