ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋ (Namma Metro) ಮತ್ತೊಂದು ಗುಡ್ನ್ಯೂಸ್ ಕೊಟ್ಟಿದೆ. 2025ರ ಜನವರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಶನಿವಾರ ರೀಚ್ -5 (ಹಳದಿ ಮಾರ್ಗದ) (Yellow Line) ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ (R.V. Road to Bommasandra) ಪ್ರಗತಿ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಸಿವಿಲ್ ಅಥವಾ ಸಿಸ್ಟಂ ಕಾಮಗಾರಿಗಳು ಗಣನೀಯವಾಗಿ ಪೂರ್ಣಗೊಂಡಿವೆ. ಪ್ರೋಟೋ-ಟೈಪ್ ರೈಲಿನ ಪರೀಕ್ಷೆ ಪ್ರಗತಿಯಲ್ಲಿದ್ದು, ರೈಲ್ವೆ ಮಂಡಳಿಯು ಟ್ರಾಕ್ಷನ್ ಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ ನೀಡಿದೆ. ಸಿಗ್ನಲಿಂಗ್ ಸಿಸ್ಟಮ್ ಮತ್ತು ರೋಲಿಂಗ್ ಸ್ಟಾಕ್ ಪೂರ್ವಭಾವಿ ಹಂತದಲ್ಲಿದೆ ಎಂದು ತಿಳಿಸಿದೆ.
ಇನ್ನೂ ನವೆಂಬರ್-ಡಿಸೆಂಬರ್ 2024ರ ವೇಳೆಗೆ 3 ರೈಲು ಸೆಟ್ಗಳು ಲಭ್ಯವಿರಲಿದೆ. ಜನವರಿ 2025ರ ವೇಳೆಗೆ ಈ ಮಾರ್ಗದಲ್ಲಿ 3 ರೈಲುಗಳೊಂದಿಗೆ 30 ನಿಮಿಷಗಳ ಆವರ್ತನದಲ್ಲಿ ಕಾರ್ಯಾರಂಭಿಸುವ ಗುರಿಯನ್ನು ಹೊಂದಿದೆ.