ಬೆಂಗಳೂರು: ಹೊಸ ವರ್ಷದಲ್ಲಿ ದಾಖಲೆ ಬರೆದ ನಮ್ಮ ಮೆಟ್ರೋ ನ್ಯೂ ಇಯರ್ ಸಂಭ್ರಮದಲ್ಲಿ ದಾಖಲೆ ಮಟ್ಟದ ಆದಾಯ ಹರಿದು ಬಂದಿದೆ.
ನಮ್ಮ ಮೆಟ್ರೋ ಸಂಚಾರದಲ್ಲಿ ಹೊಸ ವರ್ಷದ ಹಿನ್ನೆಲೆ ಡಿ.31ರಂದು ಒಂದೇ ದಿನ ಬೆಳಗ್ಗೆಯಿಂದ ರಾತ್ರಿವರೆಗೆ 6.50 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ನಮ್ಮ ಬಿಎಂಆರ್ಸಿಎಲ್ ಸಂಸ್ಥೆಗೆ ಬರೋಬ್ಬರಿ 1.70 ಕೋಟಿ ರೂ. ಆದಾಯ ಬಂದಿದೆ.
ಡಿಸೆಂಬರ್ 31 ರಂದು ಒಂದೇ ದಿನ ದಾಖಲೆ ಬರೆದ ಮೆಟ್ರೋ ರೈಡರ್ ಶಿಪ್ ಹಾಗೂ ಮೆಟ್ರೋ ಆದಾಯ ಹೆಚ್ಚಳವಾಗಿದೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಹೆಚ್ಚಿನ ಆದಾಯ ಹಾಗೂ ಪ್ರಯಾಣಿಕರು ಸಂಚಾರ ಮಾಡಿದ ದಾಖಲೆ ನಿರ್ಮಾಣವಾಗಿದೆ. ಡಿ.31 ರಂದು ಮೆಟ್ರೋದಲ್ಲಿ 6. 50 ಲಕ್ಷ ಪ್ರಯಾಣಿಕರ ಸಂಚಾರ ಮಾಡಿದ್ದಾರೆ. ಈ ಪ್ರಯಾಣಿಕರ ಸಂಚಾರದಿಂದ ಒಂದೇ ದಿನದಲ್ಲಿ ಬರೀಬ್ಬರಿ 1.70 ಕೋಟಿ ರೂ. ಆದಾಯ ಗಳಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಮಧ್ಯ ರಾತ್ರಿ 2 ಗಂಟೆಯವರೆಗೂ ಮೆಟ್ರೋ ಪ್ರಯಾಣದ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಎಂ.ಜಿ. ರಸ್ತೆ, ಕಬ್ಬನ್ ಪಾರ್ಕ್ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಬಳಕೆ ಮಾಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಕಾರಣ ನಿಗಮದ ಸಿಬ್ಬಂದಿ ಜೊತೆಗೆ 100 ಕ್ಕೂ ಹೆಚ್ಚು ಹೋಂ ಗಾರ್ಡ್ ಗಳನ್ನ ನಿಯೋಜನೆ ಮಾಡುವ ಮೂಲಕ ಭದ್ರತೆ ಒದಗಿಸಲಾಗಿತ್ತು. 2022ರ ಆರಂಭದಲ್ಲಿ 2 ಲಕ್ಷ ರೈಡರ್ ಶಿಫ್ ಇದ್ದು, ಡಿಸೆಂಬರ್ ಗೆ 5 ಲಕ್ಷದವರೆಗೂ ಹೆಚ್ಚಿಗೆ ಆಗಿತ್ತು. ಈಗ ಡಿ.31 ರಂದು ಮೊದಲ ಬಾರಿಗೆ ಆರೂವರೆ ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.