ಬೆಂಗಳೂರು:– ನಮ್ಮ ಮೆಟ್ರೋ ಚಾಲಕ ರಹಿತ ರೈಲು ಸಂಚಾರ ಸಿಗ್ನಲಿಂಗ್ ಟೆಸ್ಟ್ ಭರದಿಂದ ಸಾಗುತ್ತಿದೆ
ರೇಣುಕಾಸ್ವಾಮಿ ಕೊಲೆ ಕೇಸ್.. ಇಂದು ದರ್ಶನ್ ಸೇರಿ ಆರೋಪಿಗಳ ಜೊತೆ ಸ್ಥಳ ಮಹಜರು!
ಚಾಲಕ ರಹಿತ ರೈಲಿನ ಆರು ಬೋಗಿಗಳ ಮೊದಲ ಸೆಟ್ ಫೆಬ್ರವರಿ 20ರಂದು ಚೀನಾದಿಂದ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿತ್ತು. ಪ್ರಸ್ತುತ ಸಿಗ್ನಲಿಂಗ್ ಟೆಸ್ಟ್ ಚಾಲಕ ರಹಿತ ರೈಲುಗಳ ಮುಖ್ಯ ಪರೀಕ್ಷೆಯ ಭಾಗವಾಗಿದೆ ಎಂದು ಯೋಜನೆಯ ಭಾಗವಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಶೀಘ್ರದಲ್ಲೇ ಹಳಿಗಿಳಿಯಲಿದೆ. ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇಂಟಿಗ್ರೇಷನ್ ಟೆಸ್ಟಿಂಗ್ ಯೆಲ್ಲೋ ಲೈನ್ನಲ್ಲಿ ನಡೆಯಲಿದೆ. ಪ್ರಸ್ತುತ, ಕೋಚ್ಗಳು ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗೆ ಒಳಗಾಗುತ್ತಿವೆ. ಶೀಘ್ರದಲ್ಲೇ, ಅವುಗಳನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲನ್ನು ಒಟ್ಟು 37 ಟೆಸ್ಟಿಂಗ್ಗೆ ಒಳಪಡಿಸಲಾಗುವುದು. ಮುಂಬರುವ ಟೆಸ್ಟಿಂಗ್ಗಳು ಸಿಗ್ನಲಿಂಗ್, ಟೆಲಿಕಮ್ಯುನಿಕೇಷನ್ಸ್ ಮತ್ತು ವಿದ್ಯುತ್ ಪೂರೈಕೆಯೊಂದಿಗೆ ವ್ಯವಸ್ಥೆಯನ್ನು ವಿಲೀನಗೊಳಿಸುವ ಗುರಿಯನ್ನು ಹೊಂದಿವೆ. ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಮತ್ತು ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿಯಿಂದ ಸುರಕ್ಷತಾ ತಪಾಸಣೆಗಳು ನಡೆಯಬೇಕಿದೆ. ಸಂಚಾರ ಆರಂಭಿಸುವ ಮುನ್ನ ಆರ್ಡಿಎಸ್ಒ ಮತ್ತು ಸಿಎಮ್ಆರ್ಎಸ್ನಿಂದ ಸಲಹೆಗಳನ್ನು ಪಡೆಯುವ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ
ಸುಮಾರು 18.82 ಕಿಲೋಮೀಟರ್ ಉದ್ದ ಯೆಲ್ಲೋ ಲೈನ್ ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)