ಮಡಿಕೇರಿ: ವಕ್ಫ್ ವಿರುದ್ಧ ಬಿಜೆಪಿ ʻನಮ್ಮ ಭೂಮಿ ನಮ್ಮ ಹಕ್ಕುʼ ಘೋಷವಾಕ್ಯದ ಅಡಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಮಡಿಕೇರಿಯಲ್ಲೂ ಸಹ ಬಿಜೆಪಿ ಪ್ರತಿಭಟನೆ ಜೋರಾಗಿ ನಡೆಯಿತು, ಈ ವೇಳೆ ಮಾತನಾಡಿದ ಮಾಜಿ ಸಂಸದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಂದು ಒಂದು ವರ್ಷ ಆರು ತಿಂಗಳಾಗಿದೆ. ನಾವು ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ ಬಂದರೆ ತಾಲಿಬಾನ್ ಸರ್ಕಾರ ಸ್ಥಾಪನೆ ಆಗುತ್ತೆ ಎಂದಿದ್ದವು. ಈಗ ಅದು ನಿಜವಾಗ್ತಿದೆ ಎಂದು ಕಿಡಿ ಕಾರಿದರು.
ನಮ್ಮ ಭೂಮಿ ನಮ್ಮ ಹಕ್ಕು ನಮ್ಮ ಘೋಷಣೆಯಲ್ಲ, ರಾಜ್ಯದ ಜನತೆಯ ಅನುಭವ.. ಕಾಂಗ್ರೆಸ್ ಸರ್ಕಾರ ಬಂದಾಗ ಆ ಭಾಗ್ಯ, ಈ ಭಾಗ್ಯ ಅಂತಿದ್ದವರು ಈ ಎಲ್ಲವನ್ನೂ ಕೊಟ್ಟಿದ್ದಾರಾ..?. ಮೊದಲು 10 ಕೆಜಿ ಅಕ್ಕಿ ಕೊಡ್ತೀವಿ ಅಂದವರು, ಕೇಂದ್ರದಿಂದ ಬರುವ 5 ಕೆಜಿ ಅಕ್ಕಿ ಮಾತ್ರ ಕೊಡ್ತಿದ್ದಾರೆ. ಉಳಿದ ಅಕ್ಕಿಗೆ ದುಡ್ಡು ಕೊಡ್ತೀವಿ ಎಂದವರು ಅದನ್ನು ನೆಟ್ಟಗೆ ಕೊಡುತ್ತಿಲ್ಲ. ನಿರುದ್ಯೋಗಿ ಯುವಕರಿಗೆ 3 ಸಾವಿರ, ಉಚಿತ ವಿದ್ಯುತ್ ಆಂದರು. ಈಗ ಎಲ್ಲವನ್ನೂ ಕೊಡ್ತಿದ್ದಾರ ಎಂದು ಪ್ರಶ್ನಿಸಿದರು. ರಾತ್ರಿ ಕಳೆದು, ಬೆಳಗಾಗುವಷ್ಟರಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿದೆ. ವಿಜಯಪುರದಲ್ಲೂ ಸಾವಿರಾರು ಎಕರೆ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ಕಿಡಿಕಾರಿದರು.