ಬೆಂಗಳೂರು:- ಮುಂದಿನ ಆರು ತಿಂಗಳು ಸೈಬರ್ ಕ್ರೈಂ ತನಿಖೆ ಭೇದಿಸುವುದು ನಮ್ಮ ಗುರಿ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ಕ್ರೈಂ ಪ್ರಮಾಣವು ಮಿತಿ ಮೀರುತ್ತಿದೆ. ಮುಂದಿನ ಆರು ತಿಂಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಯೂ ಸೈಬರ್ ಕ್ರೈಂ ತನಿಖೆ ನಡೆಸಿ ಪ್ರಕರಣ ಭೇದಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು
ನಗರದ ಪ್ರತಿ ಪೊಲೀಸ್ ಠಾಣೆಗಳಲ್ಲೂ ಸೈಬರ್ಗೆ ಸಂಬಂಧಿಸಿದ ವಾರ್ಷಿಕವಾಗಿ 4 ರಿಂದ 5 ಸಾವಿರ ಕೇಸ್ಗಳು ದಾಖಲಾಗುತ್ತಿವೆ.
ಒಂದು ಠಾಣೆಯ ಸಿಬ್ಬಂದಿಯಿಂದ 5 ಸಾವಿರ ಕೇಸ್ ಬೇಧಿಸುವುದು ಅಸಾಧ್ಯ. ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಸೈಬರ್ ಕ್ರೈಂ ನಿಯಂತ್ರಿಸಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಇನ್ನಷ್ಟು ದಕ್ಷತೆ ಹೆಚ್ಚಿಸುವ ಅಗತ್ಯವಿದೆ. ಪ್ರತಿ ಸೈಬರ್ ಠಾಣೆಗಳಲ್ಲಿ ಇದುವರೆಗೆ ಠಾಣಾಧಿ ಕಾರಿಯೇ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇನ್ನು ಮುಂದೆ ಸೈಬರ್ ಠಾಣೆಗಳಲ್ಲಿ ಡಿವೈಎಸ್ಪಿಗಳನ್ನು ನೇಮಿಸಲು ಚಿಂತಿಸಲಾಗಿದೆ. ಹೆಚ್ಚಿನ ಪ್ರಮಾಣದ ಸೈಬರ್ ಕ್ರೈಂ ಆರೋಪಿಗಳು ಸ್ಥಳೀಯರೇ ಆಗಿರುತ್ತಾರೆ. ಹೊರ ರಾಜ್ಯಗಳ ಸೈಬರ್ ಕಳ್ಳರ ಪತ್ತೆಗೆ ಅಲ್ಲಿನ ಪೊಲೀಸರು ಕರ್ನಾಟಕ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ನಗರದಲ್ಲಿ ರೌಡಿಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಅಪರಾಧಗಳನ್ನು ನಿಯಂತ್ರಿಸುವುದು ಹಾಗೂ ಸಮರ್ಪಕವಾಗಿ ಪ್ರಕರಣದ ತನಿಖೆ ನಡೆ ಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚುವರಿ ಎಸ್ಪಿ-2 ಹುದ್ದೆಯನ್ನು ಭರ್ತಿಗೊಳಿ ಸಲಾಗುತ್ತಿದೆ. ಇದ ರಿಂದ ಶಿಕ್ಷೆಯ ಪ್ರಮಾಣ ಹೆಚ್ಚುವಂತೆ ಮಾಡಲಾ ಗು ವುದು ಎಂದು ಹೇಳಿದರು.
ಇನ್ನು ಬೆಂಗಳೂರಿನಲ್ಲಿ ಕಳೆದ 6 ತಿಂಗಳಿನಿಂದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.