ಹುಬ್ಬಳ್ಳಿ: ತಮಿಳುನಾಡಿನಲ್ಲಿ ನಮ್ಮ ಅಪ್ರೋಚ್ ಬೇರೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕೇಶ್ವಾಪುರದ ಆಕ್ಸ್ಫರ್ಡ್ ಕಾಲೇಜು ಹತ್ತಿರ ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಹುಬ್ಬಳ್ಳಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ವೇದಿಕೆಯಲ್ಲಿ ಬಿಜೆಪಿಯ ಮುಖಂಡರೊಂದಿಗೆ ಪ್ರಧಾನಮಂತ್ರಿ ಯವರ ಮನ್ ಕೀ ಬಾತ್ ಕಾರ್ಯಕ್ರಮದ 109ನೇ ಆವೃತ್ತಿಯನ್ನು ವೀಕ್ಷಿಸಿ ಅವರು ಮಾತನಾಡಿದರು,
ಬಿಹಾರದಲ್ಲಿ ನಮ್ಮ ಪಕ್ಷದ ಸ್ವಂತ ಶಕ್ತಿಯಿದ್ದ ಎರಡನೆ ಬಾರಿ ಆರ್ಜೆಡಿ ಜೊತೆ ಹೋಗಿ ನಿತೀಶ್ಕುಮಾರ್ಗೆ ಅರಿವು ಮೂಡಿದೆಆರ್ಜೆಡಿ ಜೊತೆ ಏಗಲು ಇನ್ನು ಆಗಲ್ಲಾ ಅನ್ನೋದು ಗೊತ್ತಾಗಿದೆಬಿಹಾರದಲ್ಲಿ ಆರ್ಜೆಡಿ, ಜೆಡಿಯು ಕಚ್ಚಾಟ ನಡೆಯುತ್ತಿದೆಆರ್ಜೆಡಿ ಮತ್ತು ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರ, ಪರಿವಾರವಾದ, ಸ್ವಜನ ಪಕ್ಷಪಾತವಿದೆದೇಶದ ಹಿತಕ್ಕೆ ಮಾರಕವಾದ ಅಂಶಗಳೆಲ್ಲಾ ಆರ್ಜೆಡಿ ಮತ್ತು ಕಾಂಗ್ರೆಸ್ನಲ್ಲಿವೆ. ಹೀಗಾಗಿ ತಲೆಕೆಟ್ಟು ನಿತೀಶ್ ಕುಮಾರ್ ಹೊರಗೆ ಬಂದಿದ್ದಾರೆ. ಆದರೆ ನಮಗೆ ಸಪೋರ್ಟ್ ಅಂತಾ ಯಾರೂ ಹೇಳಿಲ್ಲ, ಎನ್ಡಿಎ ಜೊತೆ ಬರ್ತಾರಾ ಅನ್ನೋದು ಆಮೇಲೆ ಗೊತ್ತಾಗುತ್ತೆ ಎಂದರು.
ದೇಶದಾದ್ಯಂತ ಆಗುತ್ತಿರುವ ಭಾರತೀಯರ ಸಾಧನೆಗಳು, ಅದರಿಂದ ದೇಶಕ್ಕೆ ಮಾಡುತ್ತಿರುವ ಮಹತ್ತರದ ಸೇವೆಯ ಕತೆಗಳನ್ನು ಪ್ರಧಾನಮಂತ್ರಿ ಅವರಿಂದ ಕೇಳುವುದು ಬಹಳ ಸ್ಫೂರ್ತಿದಾಯಕವಾಗಿತ್ತು. ಪ್ರಧಾನಿಗಳ ಮನ್ ಕೀ ಬಾತ್ ದೇಶದೆಲ್ಲೆಡೆ ತಲುಪಿ, ಎಲ್ಲ ಭಾರತೀಯರನ್ನು ದೇಶಸೇವೆಗೆ ಪ್ರೇರೇಪಿಸಲಿ ಎಂದು ಆಶಯ ವ್ಯಕ್ತಪಡಿಸಿದರು. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅನೇಕ ವಿಷಯಗಳ ಬಗ್ಗೆ ಪ್ರಧಾನಿ ಮಾತಾಡಿದ್ರು ಎಂದ ಅವರು, ನಮಗೆ ಗೊತ್ತಿರದ ಅನೇಕ ವಿಷಯಗಳ ಕುರಿತು ಹೇಳಿದ್ರು.
ಅರ್ಧ ಗಂಟೆಯಲ್ಲಿ ಸಾಕಷ್ಟು ವಿಷಯ ದೇಶದ ಜನರಿಗೆ ಗೊತ್ತಾಗುತ್ತೆ ಜನರಿಗೆ ಪ್ರೇರಣೆ ಕೊಡಲು ಉತ್ತಮ ಮಾದ್ಯಮವಾಗಿದೆ ಎಲೆ ಮರೆ ಕಾಯಿಯಂತೆ ಇರುವವರನ್ನು ಗುರುತಿಸಿ ಪ್ರಧಾನಿ ಮಾತಾಡ್ತಾರೆ ಪರೀಕ್ಷಾ ಪೇ ಚರ್ಚಾದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು, ಅವರ ಆತ್ಮಸ್ಥೈರ್ಯ ಹೆಚ್ಚಾಗುತ್ತೆ ಭಾರತದ ಪ್ರಧಾನಿಗಳು ಪ್ರತಿ ತಿಂಗಳೂ ಕಾರ್ಯಕ್ರಮ ಮಾಡುವುದು ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಬಿಜೆಪಿಯ ಪ್ರಮುಖರು ಕಾರ್ಯಕ್ರಮದಲ್ಲಿ ಮುಂತಾದವರಿದ್ದರು.