ತುಮಕೂರು:- MP ಎಲೆಕ್ಷನ್ ನಂತರವೂ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಚುನಾವಣೆ ಮುಗಿದ ಮೇಲೇಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ. ಈ ಸಂಬಂಧ ಕಾಪಾಡುಕೊಂಡು ಹೋಗುತ್ತೇವೆ. ನಮ್ಮ ಬಾಂಧವ್ಯ ತಾತ್ಕಾಲಿಕವಲ್ಲ. ಈ ಬಾಂಧವ್ಯವನ್ನ ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.
BIGG News: ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ
ಯಾಕೆ ಕಾಂಗ್ರೆಸ್ ಈ ಹೀನಾಯ ಸ್ಥಿತಿ ತಲುಪಿದೆ, ಎಲ್ಲಿದೆ ಕಾಂಗ್ರೆಸ್? ಇಡೀ ಹಿಂದೂಸ್ತಾನದಲ್ಲಿ ಕಾಂಗ್ರೆಸ್ ನಾಲ್ಕು ಕಡೆ ಇದೆ. ಇಡೀ ದೇಶದಲ್ಲಿ ರಾಜಸ್ತಾನ್, ಮಧ್ಯ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಇದೆ ಎಂದರು
ಈ ಕರ್ನಾಟಕ ಸಮನ್ವಯ ಸಮಿತಿಯಲ್ಲಿ ನಾನು ಒಂದು ಶಬ್ಧ ಬಳಕೆ ಮಾಡಿದೆ. ನಾನು ಯಾವತ್ತೂ ಕಟುವಾದ ಶಬ್ಧ ಬಳಕೆ ಮಾಡಲ್ಲ. ಜೆಡಿಎಸ್ ಎಲ್ಲಿದೆ ಅಂತಾ ಮೈಸೂರಿನಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಪ್ರಶ್ನೆ ಮಾಡುತ್ತಾರೆ. ಕುಮಾರಸ್ವಾಮಿಗೆ ಅವರ ಮಗನನ್ನ ಗೆಲ್ಲಿಸಲು ಆಗಲ್ಲ, ಕುಮಾರಸ್ವಾಮಿ ತಂದೆ ತುಮಕೂರಿನಲ್ಲಿ ನಿಂತಾಗ ಗೆಲ್ಲಿಸಲು ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದರು. ಅಲ್ಲದೆ, 2019ರ ಸೋಲಿಗೆ ಕಾರಣ ಯಾರು ಅಂತ ಸೋಲಿನ ಪರಾಮರ್ಶೆ ಮಾಡಿದರು.
ನಾನು ತುಮಕೂರಿನಲ್ಲಿ ನಿಂತಾಗ ಏನೇನು ಆಟ ಆಡಿದರು, ನಾನು ತುಮಕೂರಿನಲ್ಲಿ ಅರ್ಜಿ ಹಾಕಬೇಕು ಅಂತ ಯೋಚಿಸಿರಲಿಲ್ಲ. ನಾನು ಮುಂದಕ್ಕೆ ಪಾರ್ಲಿಮೆಂಟ್ಗೆ ನಿಲ್ಲುವುದಿಲ್ಲ ಅಂತ ಖಂಡತುಂಡವಾಗಿ ಹೇಳಿದ್ದೆ. ನನ್ನ ಮಂಡಿನೋವು ಇತ್ತು. ರಾಹುಲ್ ಗಾಂಧಿ, ಸೋನಿಯಾಗಾಂಧಿ, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ್ ಖರ್ಗೆ ಇದ್ದರು. ಅವರೆಲ್ಲಾರ ಮುಂದೆ ಚುನಾವಣೆಗೆ ನಿಲ್ಲದಿರುವ ಬಗ್ಗೆ ಹೇಳಿದ್ದೆ. ನಾನೇನು ಸೀಟು ಕೇಳಿರಲಿಲ್ಲ ಎಂದರು.
ಸಿದ್ದರಾಮಯ್ಯನವರು ದೇವಲೋಕದಿಂದ ಇಳಿದುಬಂದಿದ್ದಾರೆ ಅನ್ನೋ ಭಾವನೆಯಿತ್ತು. ದೇವೇಗೌಡರೇ ನೀವು ತುಮಕೂರಿಗೆ ಬಂದ ಕಾರಣವೇನು ಎಂದು ರಾಜಣ್ಣ ಅವರು ಹೇಳುತ್ತಾರೆ. ಆದರೆ, ತುಮಕೂರಿಗೆ ಬರಬೇಕು ಅಂತಾ ನಾನು ಹೇಳೇ ಇಲ್ಲ. ರಾಜಕೀಯ ಚದುರಂಗದ ಆಟ. ನೀವು ಮುದ್ದಹನುಮೇಗೌಡರಿಗೆ ಅನ್ಯಾಯ ಮಾಡಿದ್ದೀರಿ. ಅವರಿಗೆ ನೀವು ಸ್ಥಾನ ಕಲ್ಪಿಸಿಕೊಡಬೇಕಿತ್ತು ಎಂದರು