ರಾಯಚೂರು: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ಕೆಲವರು ಹೋಗುವವರು ಹೋಗುತ್ತಾರೆ ನಾವು ಇಲ್ಲೇ ಇರುವ ರಾಮಮಂದಿರಕ್ಕೆ ಹೋಗುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಜಿಲ್ಲೆಯ ಲಿಂಗಸುಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು, ” ಅಯೋಧ್ಯ ರಾಮಮಂದಿರಕ್ಕೆ ಕಾಂಗ್ರೆಸ್ ಕೆಲ ನಾಯಕರಿಗೆ ಆಹ್ವಾನ ಇಲ್ಲದಿರುವ ವಿಚಾರ ಹೋಗುವವರು ಅಲ್ಲಿ ಹೋಗ್ತಾರೆ ,ಇಲ್ಲಾ ಇಲ್ಲೇ ಊರಲ್ಲಿ ರಾಮಮಂದಿರಕ್ಕೆ ಹೋಗ್ತಾರೆ ಎರಡೂ ಕಡೆ ಆಚರಣೆ ಮಾಡಲಾಗುತ್ತದೆ. ನಾವು ಊರಲ್ಲೇ ರಾಮಮಂದಿರಕ್ಕೆ ಹೋಗುತ್ತೇವೆ ” ಎಂದರು.
ವಿಜ್ಞಾನ ಸರ್ವಶ್ರೇಷ್ಠ ವಿಜ್ಞಾನ ಎಲ್ಲರ ಮನೆ ಮಾತಾಗಬೇಕು. ವಿಜ್ಞಾನಕ್ಕೆ ನಾವು ಹೆಚ್ಚು ಮಹತ್ವ ಕೊಡಬೇಕು, ವಿಜ್ಞಾನದ ಕಡೆಗೆ ಎಲ್ಲರೂ ಬರಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ.ನಮ್ಮ ನಿರಂತರ ಹೋರಾಟ ಪರಿಷತ್ತಿನ ಹೋರಾಟವು ಅದೇ ಆಗಿದೆ.ನಾವು ಇದರ ಭಾಗವಾಗಿ ಮುಂಚೆ ಕೆಲಸ ಮಾಡಿದ್ದೇವೆ ಅದರಿಂದ ನನಗೆ ವೈಜ್ಞಾನಿಕವಾಗಿ 3ನೇ ರಾಜ್ಯ ಮಟ್ಟದ ಸಮ್ಮೇಳನದ ಅಧ್ಯಕ್ಷನಾಗಿ ನೇಮಕ ಮಾಡಿದ್ದಾರೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡಿಜೆಹಳ್ಳಿ ಕೆಜಿಹಳ್ಳಿ ಗಲಭೆಕೋರರ ಕೇಸ್ ಹಿಂಪಡೆಯಲು ಮುಂದಾದ ಸರಕಾರ ಕನ್ನಡ ಪರಹೋರಾಟಗಾರರ ಬಂಧನಕ್ಕೆ ಮುಂದಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದವರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ನಡೆದು ಮೂರ್ನಾಲ್ಕು ವರ್ಷ ಆಗಿರಬಹುದು ಆ ವಿಷಯ ಬಂದಾಗ ಸರಕಾರ ಅದರ ಬಗ್ಗೆ ಚಿಂತನೆ ಮಾಡುತ್ತದೆ.ಈಗಾಗಲೇ ಆ ಇಲಾಖೆಯವರು ಕೇಸ್ ಹಾಕಿಬಿಟ್ಟಿದ್ದಾರೆ. ಅದನ್ನ ಸರಿಪಡಿಸುವುದು ಹೇಗೆ ಅಂತ ನಾವು ಚಿಂತನೆ ಮಾಡುತ್ತೇವೆ.ಈ ಕುರಿತು ಗೃಹ ಮಂತ್ರಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದರು.