ಬೆಂಗಳೂರು: ರಾಜ್ಯ ಸರ್ಕಾರದಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಹೌದು ಈಗಾಗಲೇ HSRP ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನವಾಗಿದೆ. ಆದರೂ, ಜನರು ಕೊನೇ ಅವಧಿಯಲ್ಲಿ ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಅಪ್ಲೋಡ್ ಸಮಸ್ಯೆಯಾಗಲಿದೆ.
ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ವಾಹನಗಳಿಗೆ HSRP ಹಾಕಲು 3 ತಿಂಗಳು ಅವಧಿ ವಿಸ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ
Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಾರಿಗೆ ಇಲಾಖೆ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ಇಲಾಖೆಗಳನ್ನ ಸಿಎಂ ಸಭೆ ಕರೆದಿದ್ದರು. ಅದೇ ರೀತಿ ಸಾರಿಗೆ ಇಲಾಖೆಯವರು ಕೂಡ ಭಾಗಿಯಾಗಿದ್ದರು. ಆಟೋ ಟ್ಯಾಕ್ಸಿ, ಲಾರಿ ಅಸೋಷಿಯಷನ್ ಅವರು ಎಲ್ಲಾ ಬಂದಿದ್ದರು.
ಅವರ ಬೇಡಿಕೆಗಳನ್ನ ಕೂಡ ಇಟ್ಟಿದ್ದಾರೆ. ಜೊತೆಗೆ, ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಬೇಡಿಕೆ ಈಡೇರಿಸಿದ್ದೇವೆ ಎಂದರು. ಇಂದು ಹೊಸ ಬೇಡಿಕೆಗಳನ್ನೂ ಸಹ ಇಟ್ಟಿದ್ದಾರೆ. ಮುಂದಿನದ್ದು ಬಜೆಟ್ ದಿನ ನೋಡೋಣ ಎಂದು ಹೇಳಿದ್ದೇವೆ ಎಂದು ಹೇಳಿದರು. ಇನ್ನು ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಮಾಡಿಸಲು ಫೆ.17ನೇ ತಾರೀಕು ಲಾಸ್ಟ ಡೇಟ್ ಇದೆ.