ನವದೆಹಲಿ: ಚಳಿಗಾಲದ ಅಧಿವೇಶನದ ಕಲಾಪ ಸುಗಮವಾಗಿ ಸಾಗಲು ವಿರೋಧ ಪಕ್ಷಗಳು ಅನುವು ಮಾಡಿಕೊಡಬೇಕೆಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಆರೋಗ್ಯಕರ ಚರ್ಚೆಗಳಿಗೆ ಮನವಿ ಮಾಡಿದರು. ಕಾಂಗ್ರೆಸ್ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಕಡಿಮೆ.
ಪದೇ ಪದೇ ಜನರಿಂದ ತಿರಸ್ಕಾರಗೊಂಡವರು ಗೂಂಡಾಗಿರಿ ಮೂಲಕ ಸಂಸತ್ತಿನ ಮೇಲೆ ಹಿಡಿತ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅಧಿವೇಶನದಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಜನರ ಸಮಸ್ಯೆಗಳ ಪ್ರಾಮಾಣಿಕ ಚರ್ಚೆ ನಡೆಸಬೇಕಿದೆ. ಹೀಗಾಗಿ, ಎಲ್ಲರೂ ಕಲಾಪದಲ್ಲಿ ಭಾಗಿಯಾಗಬೇಕು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ರೈತರ ಗಮನಕ್ಕೆ.. ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಬರಲ್ಲ 19ನೇ ಕಂತಿನ ಹಣ!?
2024 ವರ್ಷದ ಕೊನೆಯ ದಿನಗಳು ನಡೆಯುತ್ತಿದ್ದು, ದೇಶವು 2025ರ ನೂತನ ವರ್ಷಕ್ಕೆ ತಯಾರಿ ನಡೆಸುತ್ತಿದೆ. ಸಂಸತ್ತಿನ ಈ ಅಧಿವೇಶನವು ಹಲವಾರು ವಿಧಗಳಲ್ಲಿ ವಿಶೇಷವಾಗಿದೆ. ಅತ್ಯಂತ ಮುಖ್ಯ ವಿಷಯವೆಂದರೆ ಸಂವಿಧಾನದ 75ನೇ ವರ್ಷದ ಆರಂಭ. ನಾಳೆ, ಸಂವಿಧಾನ ದಿನ. ಎಲ್ಲರೂ ಸಂವಿಧಾನದ 75 ನೇ ವರ್ಷವನ್ನು ಆಚರಿಸುತ್ತಾರೆ. 75ನೇ ವರ್ಷದ ಸಂವಿಧಾನದ ದಿನದ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದ ಕಲಾಪ ಸುಗಮವಾಗಿ ಸಾಗಲು ವಿರೋಧ ಪಕ್ಷಗಳು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.