ಧಾರವಾಡ: ಹುಬ್ಬಳ್ಳಿ ಧಾರವಾಡ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರ ಬಂಧಿಸಿದ್ದಾರೆ. ಧಾರವಾಡ ಮಾಳಮಡ್ಡಿ ಬಡಾವಣೆಯಲ್ಲಿ ಶನಿವಾರ ಕಳ್ಳತನ ನಡೆದಿತ್ತು. ಪ್ರಕರಣ ನಡೆದ ಕೇವಲ ಐದು ಗಂಟೆಯಲ್ಲೇ ಹುಬ್ಬಳ್ಳಿ ಧಾರವಾಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೀಟರ್ ಬಡ್ಡಿ ದಂಧೆಕೋರರಿಗೆ ಪೊಲೀಸರ ಬಿಗ್ ಶಾಕ್ ; ಗದಗನಲ್ಲಿ ಹಲವೆಡೆ ರೇಡ್
ಹಿರಿಯ ವೈದ್ಯ ಆನಂದ ಕಬ್ಬೂರ ಪತ್ನಿ ವಿನೋದಿನಿ ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಹಲ್ಲೆ ಮಾಡಿ ಮಾಂಗಲ್ಯ ಕಳ್ಳತನ ಮಾಡಿದ್ದರು. ಮನೆಯಲ್ಲಿ ಇದ್ದ ಹಣ ಕೂಡಾ ಕದ್ದಿದ್ದರು. ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸ್ ಅಧಿಕಾರಿಗಳ ತಂಡ ತಕ್ಷಣ ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿಯ ಸಹಾಯದಿಂದ ಮೂರು ಜನರನ್ನು ಬಂಧಿಸಿದೆ. ಧಾರವಾಡ ರಾಯಾಪೂರದಲ್ಲಿ ಅಶೋಕ ಹೊಸಮನಿ, ಶಿವಕುಮಾರ್ ಕೋಕಾಟಿ, ಶಿವಾನಂದ ಕರಡಿಗುಡ್ಡ ವಶಕ್ಕೆ ಪಡೆಯಲಾಗಿದೆ..
ಕಳ್ಳರಿಂದ ಬೆಳಗಾವಿ ಪಾಸಿಂಗ್ ಇರುವ ಮೂರು ಬೈಕ್ ಗಳು ಮತ್ತು ಒಂದು ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಈ ಖದೀಮರು ಒಂದೇ ನಂಬರ್ನ ಬೈಕ್ ಕಳ್ಳತನಕ್ಕೆ ಬಳಸುತ್ತಿದ್ದರು. ಸದ್ಯ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.