ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಜನರಿಗೆ ತೊಂದರೆ ಕೊಡ್ತಿದ್ದ ಮಂಗಗಳನ್ನ ಬಲೆಗೆ ಕೆಡವಲಾಗಿದ್ದು 40 ಅಧಿಕ ಮಂಗಗಳನ್ನ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.. ಕಳೆದ ಕೆಲ ತಿಂಗಳಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ಊರಲ್ಲಿ ಕೆಲವರ ಮೇಲೆ ವಾನರ ಸೇನೆ ಅಟ್ಯಾಕ್ ಮಾಡಿದೆ.
ಹೀಗಾಗಿ ಜನ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು.ಇದೀಗ ಕೊಲ್ಲಾಪುರದಿಂದ ವಿಶೇಷ ತಂಡ ಆಗಮಿಸಿ ಆಪರೇಷನ್ ಮಂಕಿ ಕಾರ್ಯ ಶುರುಮಾಡಿದೆ.. ಸದ್ಯ 42 ಮಂಗಗಳು ಬಲೆಗೆ ಬಿದ್ದಿದ್ದು ಸೆರೆ ಹಿಡಿಯುವ ಕಾರ್ಯಾಚರಣೆ ಇನ್ನೂ ನಡೆದಿದೆ.