ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರ ಕುಟುಂಬಸ್ಥರನ್ನು ಭೇಟಿ ಮಾಡಿದೆ. ಅವರ ಕಣ್ಣೀರು ನೋಡಿ ಮತ್ತೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೇನೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಹೇಳಿದ್ದಾರೆ. ಶಿರೂರು ಗುಡ್ಡ ಕುಸಿತ ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಅಮವಾಸ್ಯೆ ಸಂದರ್ಭದಲ್ಲಿ ನೀರಿನ ಸೆಳೆತ ಕಡಿಮೆ ಇರುತ್ತದೆ. ಮಳೆಯಾಗದೇ ಇದ್ದರೆ ಅಂದು ಕಾರ್ಯಾಚರಣೆ ಮಾಡುತ್ತೇನೆ. ಕೇರಳದಿಂದ ಬೋಟ್ ಒಂದು ಬರುತ್ತದೆ. ಬೋಟ್ ಬಂದು ಮಣ್ಣು ತೆರವು ಮಾಡಿದರೆ ಕಾರ್ಯಾಚರಣೆ ಮಾಡಬಹುದು ಎಂದರು. ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಡೆಸಿದ 13 ದಿನಗಳ ಕಾರ್ಯಾಚರಣೆಯಲ್ಲಿ 8 ಮಂದಿಯ ಮೃತದೇಹ ದೊರೆತಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.
ವಿದೇಶ ಪ್ರಯಾಣಕ್ಕೆ ತೆರಿಗೆ ಪಾವತಿ ಪ್ರಮಾಣಪತ್ರ ಎಲ್ಲರಿಗೂ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಈ ಹಿನ್ನೆಲೆ ಮುಳುಗು ತಜ್ಞರ ತಂಡ ಕೂಡ ಕಾರ್ಯಾಚರಣೆ ನಡೆಸಿತ್ತು. ಆದರೆ ಭಾರೀ ಮಳೆ ಹಾಗೂ ಗಂಗಾವಳಿ ನದಿಯಲ್ಲಿ ಕಲ್ಲು ಬಂಡೆಗಳಿದ್ದರಿಂದ ಅಡಚಣೆ ಉಂಟಾಗಿತ್ತು. ಅಲ್ಲದೇ ನದಿಯಲ್ಲಿ ಟ್ಯಾಂಕರ್ ಹಾಗೂ ಮರದ ದಿಮ್ಮಿಗಳನ್ನು ಮುಳುಗು ತಜ್ಞರು ಪತ್ತೆಹಚ್ಚಿದ್ದರು. ಭಾರೀ ಮಳೆಯಿಂದ ಅಡಚಣೆ ಉಂಟಾದ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.