ವಾಷಿಂಗ್ಟನ್: ಮನೆಯ ಮಾಲೀಕನೊಬ್ಬ ಗಾಢವಾದ ನಿದ್ದೆಯಲ್ಲಿದ್ದಾಗ ಹಸಿದಿದ್ದ ಕರಡಿಯೊಂದು ಮನೆಗೆ ಒಳನುಗ್ಗಿ ಫ್ರಿಡ್ಜ್ ನಲ್ಲಿ ಇದ್ದ ಬ್ರೆಡ್, ಜಾಮೂನು ಹಾಗೂ ಇನ್ನಿತರ ಆಹಾರವನ್ನು ತಿಂದ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಅಮೆರಿಕಾದ ಕೊಲೊರಾಡೋದಲ್ಲಿ ಮನೆಗೆ ಒಳನುಗ್ಗಿ ಆಹಾರವನ್ನು ಕರಡಿಯೊಂದು ಸೇವಿಸಿದೆ. ಮಾಲೀಕ ಮಹಡಿಯಲ್ಲಿ ಮಲಗಿದ್ದ ವೇಳೆ ಕರಡಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ಓಪನ್ ಮಾಡಿ ಆಹಾರವನ್ನು ಹುಡುಕಿದೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಇತರೇ ಆಹಾರಗಳನ್ನು ತಿಂದಿದೆ.
https://www.facebook.com/watch/?v=981573346261908
ಇದೇ ಕರಡಿ ಮನೆಯೊಂದಕ್ಕೆ ನುಗ್ಗಿ ಐಸ್ ಕ್ರೀಂ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದಿತ್ತು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕರಡಿ ಮನೆಯಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.