ರೋಹಿತ್ ಆರ್ಭಟ ಅವರ ತವರಲ್ಲಿ ಮಾತ್ರ ಎಂದು ಹೇಳುವ ಮೂಲಕ ಮಾಜಿ ಆಫ್ರಿಕನ್ ಕ್ರಿಕೆಟಿಗ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ ಎಂತಹ ಅದ್ಭುತ ಆಟಗಾರ ಎಂದು ಎಲ್ಲರಿಗೂ ಗೊತ್ತಿದೆ. ಒಂದು ಸಲ ಅವರು ಫಾರ್ಮ್ ಗೆ ಬಂದ್ರೆ 6,4 ಗಳಿಗೆ ಬರವೇ ಇರುವುದಿಲ್ಲ. ಇಂತಹ ಸ್ಟಾರ್ ಟೀಮ್ ಇಂಡಿಯಾ ಆಟಗಾರನ ಬಗ್ಗೆ ವಿದೇಶಿ ಮಾಜಿ ಕ್ರಿಕೆಟಿಗರೊಬ್ಬರು ವ್ಯಂಗ್ಯದ ಮಾತಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಎಸ್, ಭಾರತದ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡ್ಯಾರಿಲ್ ಕುಲ್ಲಿನನ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕುರಿತು ಮೊದಲು ಪ್ರಶ್ನೆಗಳನ್ನು ಎತ್ತಿದರು. ನಂತರ ಅವರ ತೂಕದ ಮೇಲೆ ವ್ಯಂಗ್ಯವಾಡಿದರು. ಹಿಟ್ಮ್ಯಾನ್ ರೋಹಿತ್ ಫ್ಲಾಟ್ ಪಿಚ್ಗಳ ರಾಜ. ಅವರು ಭಾರತದ ಪಿಚ್ಗಳಲ್ಲಿ ಮಾತ್ರ ರನ್ ಗಳಿಸಬಲ್ಲರು. ರೋಹಿತ್ ಶರ್ಮಾ ಸಾಗರೋತ್ತರ ಪಿಚ್ಗಳಿಗೆ ಪರಿಪೂರ್ಣ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ವಿಶೇಷವಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಅವರ ಆಟ ನಡೆಯುವುದಿಲ್ಲ. ಅವರು ತವರು ನೆಲದಲ್ಲಿ ಮಾತ್ರ ರನ್ ಗಳಿಸಬಲ್ಲರು, ಅವರ ಅಂಕಿಅಂಶಗಳು ಸಹ ಇದಕ್ಕೆ ಸಾಕ್ಷಿಯಾಗಿದೆ.
ಇದೇ ವೇಳೆ ರೋಹಿತ್ ಅವರ ಫಿಟ್ನೆಸ್ ಬಗ್ಗೆ ಮಾತನಾಡಿದ ಅವರು, ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದೈಹಿಕ ಸ್ಥಿತಿಯಲ್ಲಿನ ವ್ಯತ್ಯಾಸವನ್ನು ನೋಡಿ. ರೋಹಿತ್ ಅಧಿಕ ತೂಕ ಹೊಂದಿರುವ ಕಾರಣ, ಅವರು ಹೆಚ್ಚು ಕಾಲ ಕ್ರಿಕೆಟ್ ಆಡುವ ಕ್ರಿಕೆಟಿಗನಲ್ಲ. ನಾಲ್ಕೈದು ದಿನಗಳ ಪಂದ್ಯ ಆಡಲು ರೋಹಿತ್ ಅವರ ದೈಹಿಕ ಸ್ಥಿತಿ ಸರಿಹೊಂದುವುದಿಲ್ಲ. ಅಲ್ಲದೆ ಅವರ ದೈಹಿಕ ಸ್ಥಿತಿ ಒಂದೇ ಆಗಿಲ್ಲದ ಕಾರಣ ಅವರು ಇನ್ನು ಮುಂದೆ ಲಾಂಗ್ ಫಾರ್ಮ್ಯಾಟ್ ಕ್ರಿಕೆಟ್ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.