ಹುಬ್ಬಳ್ಳಿ: ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಸಿಬಿ ನಗರದ ವಿದ್ಯಾರ್ಥಿನಿ ಪೂಜಾ ಅವರಿಗೆ ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಆನ್ಲೈನ್ನಲ್ಲಿ ₹3.25 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಮುಡಾ ಹಗರಣ: ನೋಟಿಸ್ ಇಲ್ಲದೇ ಲೋಕಾ ಎಸ್ಪಿ ಕಚೇರಿಗೆ ವಿಸಿಟ್ ಕೊಟ್ಟ ಸಿದ್ದರಾಮಯ್ಯ ಸಂಬಂಧಿ!
ಪೂಜಾ ಅವರಿಗೆ ಗೂಗಲ್ ರೇಟಿಂಗ್ ನೀಡುವ ಮೂಲಕ ಬಿಡುವಿನ ವೇಳೆ ಕೆಲಸ ಮಾಡಬಹುದು ಎಂದು ನಂಬಿಸಿ, ಹಣ ಹೂಡಿಕೆಗೆ ಉತ್ತೇಜಿಸಿದ್ದಾನೆ. ಹೂಡಿಕೆ ಮಾಡಿದ ಹಣಕ್ಕೆ ಆರಂಭದಲ್ಲಿ ಲಾಭ ನೀಡಿ ನಂಬಿಕೆ ಗಳಿಸಿ, ನಂತರ ಹೆಚ್ಚುವರಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.