ಗದಗ: 2024-25 ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗದಗ ತಾಲೂಕಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕದ ಸಿಎಂಗೆ ಬಂದಿದ್ಯಾ ಅಂಬಾನಿ ಪುತ್ರನ ಮದುವೆ ಆಮಂತ್ರಣ…!?
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 27-06-2024 ಆಗಿದ್ದು, ಕೊನೆಯ ದಿನಾಂಕ: 10-07-2024 ಆಗಿದೆ. ಗದಗ ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರದೇಶಕ್ಕಾಗಿ ಹೊಸದಾಗಿ ಪ್ರದೇಶ ಬಯಸುವ ಪ್ರದರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2024-25ನೇ ಸಾಲಿಗೆ ಆನ್ ಲೈನ್ ಮೂಲಕ ಅರ್ಜಿ ಹಾಕಲು ಸೂಚಿಸಿದೆ.
* ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ (ಪ್ರವರ್ಗ-1, ಎಸ್.ಸಿ & ಎಸ್.ಟಿ ರೂ. 1.00 ಲಕ್ಷ) ಹಾಗೂ (ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ ರೂ. 44500/-).
* ವಿದ್ಯಾರ್ಥಿಗಳು ವೆಬ್ ಸೈಟ್ https://shp.karnataka.gov.in/bcwd ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರದೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ https://bcwd.karnataka.gov.in/ ನ್ನು ನೋಡಬಹುದು.
* ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ [email protected] ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು.
* ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆ: 8050770004 ಮತ್ತು 8050770005
ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ತಪ್ಪದೇ ಅರ್ಜಿಗಳನ್ನು ಹಾಕಲು ಗದಗ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಾ: ಬಸವರಾಜ ವೆಂ. ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿ ನಿಲಯಗಳು ಈ ಕೆಳಗಿನಂತಿವೆ.
* ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹರ್ಲಾಪೂರ-BCWD-530 ಸರ್ಕಾರಿ ಶಾಲೆ ಆವರಣದಲ್ಲಿ ಹರ್ಲಾಪೂರ.
* ಮೆಟ್ರಿಕ್ ಪೂರ್ವ ಬಾಲಕರ ಪರಿವರ್ತಿತ ವಿದ್ಯಾರ್ಥಿ ನಿಲಯ ಗದಗ-BCWD-532 ಗಾಂಧಿ ನಗರ ಹತ್ತಿರ ಆಂಜನೇಯ ದೇವಸ್ಥಾನ ಬೆಟಗೇರಿ, ಗದಗ
* ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕದಡಿ-ಬಿ.ಸಿ.ಡಬ್ಲ್ಯೂಡಿ-534 ಕದಡಿ ಗ್ರಾಮದಲ್ಲಿ ಬಳಗಾನೂರ ರಸ್ತೆ,
* ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಲಕ್ಕುಂಡಿ- BCWD-535 ಶಿವಪ್ಪ ಅಜ್ಜನ ಮಠದ ಎದುರುಗಡೆ ಲಕ್ಕುಂಡಿ
* ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮುಳಗುಂದ BCWD-536 ಬಾಲಲೀಲ ಕಲ್ಯಾಣ ಮಂಟಪ ಹಿಂದುಗಡೆ, ಯಳವತ್ತಿ ರೋಡ ಮುಳಗುಂದ
* ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಗದಗ-BCWD-537 ಗಣಪತಿ ದೇವಸ್ಥಾನ ಜೆ.ಟಿ ಕಾಲೇಜ ಹತ್ತಿರ ಹಾತಲಗೇರಿ ನಾಕಾ ಗದಗ
![](https://ainlivenews.com/wp-content/uploads/2024/01/Ad-Banner-copy-scaled.jpg)