ಜರ್ಮನಿಯಲ್ಲಿ ಒನ್ಪ್ಲಸ್ ಫೋನ್ (OnePlus Phones) ಮಾರಾಟವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಪೇಟೆಂಟ್ ಸಮಸ್ಯೆಗಳ (Patent Dispute) ಕಾನೂನು ವಿವಾದದಿಂದಾಗಿ ಜರ್ಮನ್ (Germany) ಅಧಿಕಾರಿಗಳು ಒನ್ಪ್ಲಸ್ ಉತ್ಪನ್ನಗಳನ್ನು ನಿಷೇಧಿಸಿದ್ದಾರೆ.
ವೈರ್ಲೆಸ್ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಯಾದ ಇಂಟರ್ಡಿಜಿಟ್ ಮತ್ತು ಒನ್ ಪ್ಲಸ್ ಮಧ್ಯೆ 5ಜಿ ಮತ್ತು ಮೊಬೈಲ್ ತಂತ್ರಜ್ಞಾನ ವಿಚಾರವಾಗಿ ತಿಕ್ಕಾಟ ನಡೆಯುತ್ತಿದೆ.
5ಜಿಯಲ್ಲಿ ತನ್ನ ಪೇಟೆಂಟ್ ಅನ್ನು ಒನ್ಪ್ಲಸ್ ಉಲ್ಲಂಘಿಸಿದೆ ಎಂದು ಇಂಟರ್ಡಿಜಿಟ್ ಆರೋಪಿಸಿದೆ. ನಿಷೇಧದಿಂದಾಗಿ ಒನ್ಪ್ಲಸ್ ಓಪನ್, ಒನ್ಪ್ಲಸ್ 12, ಒನ್ ಪ್ಲಸ್ 11 ಫೋನ್ಗಳ ಮಾರಾಟವನ್ನು ಆನ್ಲೈನ್ ಸ್ಟೋರ್ನಿಂದಲೇ ತೆಗೆಯಲಾಗಿದೆ. ಸದ್ಯ ಜರ್ಮನಿಯಲ್ಲಿ ಒನ್ಪ್ಲಸ್ ಪ್ಯಾಡ್ 2 ಮತ್ತು ಒನ್ ಪ್ಲಸ್ ವಾಚ್ 2 ಮಾತ್ರ ಆನ್ಲೈನ್ ಸ್ಟೋರ್ನಲ್ಲಿ ಲಭ್ಯವಿದೆ. ಈ ಎರಡೂ ಉತ್ಪನ್ನಗಳಿಗೆ ಸೆಲ್ಯುಲಾರ್ ಬೆಂಬಲದ ಅಗತ್ಯ ಇಲ್ಲದ ಕಾರಣ ಇವುಗಳಿಗೆ ನಿಷೇಧ ಅನ್ವಯವಾಗುವುದಿಲ್ಲ.