ಚೀನಾದ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿರುವ ಇನ್ ಪ್ಲಸ್ ಸಾಕಷ್ಟು ಹೊಸ ಹೊಸ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಒನ್ ಪ್ಲಸ್ ಸಂಸ್ಥೆಯು ಒನ್ಪ್ಲಸ್ 12R ಸ್ಮಾರ್ಟ್ಫೋನ್ ಫಸ್ಟ್ ಸೇಲ್ ಫೆ. 6 ರಂದು ಮುಕ್ತಾಯವಾಗಿದ್ದು, ಸದ್ಯದಲ್ಲೇ ಒನ್ಪ್ಲಸ್ 12R ಸ್ಮಾರ್ಟ್ಫೋನ್ ಓಪೆನ್ ಸೇಲ್ ಪ್ರಾರಂಭವಾಗಲಿದೆ. ಈ ಮೂಲಕ ಮೊದಲು ಖರೀದಿಸಲು ಸಾಧ್ಯವಾಗದೆ ಇದ್ದವರು ಇದೀಗ ಕೊಂಡುಕೊಳ್ಳಬಹುದಾಗಿದೆ.
ಒನ್ಪ್ಲಸ್ 12R ಸ್ಮಾರ್ಟ್ಫೋನ್ ಮಾರಾಟವು ಇದೇ ಫೆಬ್ರವರಿ 13ರಿಂದ ಒನ್ಪ್ಲಸ್ ಇಂಡಿಯಾ ವೆಬ್ಸೈಟ್, ಅಮೆಜಾನ್ ಇ ಕಾಮರ್ಸ್ ಹಾಗೂ ರಿಟೇಲ್ ಸ್ಟೋರ್ಗಳ ಲಭ್ಯವಾಗಲಿದೆ. ಅಂದ ಹಾಗೆ ಈ 12R ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ.
ಒನ್ಪ್ಲಸ್ 12R ಮೊಬೈಲ್ ನ ಬೆಲೆ ರೂ. 39,999 ರಿಂದ ಪ್ರಾರಂಭವಾಗುತ್ತದೆ. ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯದ್ದಾಗಿದೆ. 16GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 45,999 ರೂ. ಆಗಿದೆ. ICICI ಕ್ರೆಡಿಟ್ ಕಾರ್ಡ್ ಮತ್ತು OneCard ಹೊಂದಿರುವವರಿಗೆ ರೂ. 1,000 ಬ್ಯಾಂಕ್ ರಿಯಾಯಿತಿ ಪಡೆಯಬಹುದಾಗಿದೆ.
ಒನ್ಪ್ಲಸ್ 12R ಖರೀದಿದಾರರು ಆರು ತಿಂಗಳ ಗೂಗಲ್ ಒನ್ ಚಂದಾದಾರಿಕೆಯನ್ನು ಮತ್ತು ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಅನ್ನು ಪಡೆಯುತ್ತಾರೆ. ಮಾರಾಟದ ಭಾಗವಾಗಿ, ಆ್ಯಕ್ಸಿಂಡೆಟ್ ಪ್ರೊಟೆಕ್ಷನ್ ಒನ್ಪ್ಲಸ್ 12R ಗ್ರಾಹಕರಿಗೆ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಅಧಿಕೃತ ವೆಬ್ಸೈಟ್ಗೆ ಬಂದ ಮೊದಲ 24 ಗಂಟೆಗಳ ಒಳಗೆ ಆರ್ಡರ್ ಮಾಡಿದ ಬಳಕೆದಾರರು 4,999 ರೂ. ಮೌಲ್ಯದ ಉಚಿತ ಒನ್ಪ್ಲಸ್ ಬಡ್ಸ್ Z2 ಅನ್ನು ನೀಡಲಾಗುತ್ತಿದೆ.
ಒನ್ಪ್ಲಸ್ ಸಂಸ್ಥೆಯ ಈ ಫೋನ್ 6.78 ಇಂಚಿನ BOE X1 OLED ಡಿಸ್ಪ್ಲೇ ಅನ್ನು ಪಡೆದಿದ್ದು, ಈ ಡಿಸ್ಪ್ಲೇಯು 1,264×2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಇದು 120Hz ProXDR ರಿಫ್ರೆಶ್ ರೇಟ್ ಪಡೆದಿರುವ ಜೊತೆ LTPO 4.0 ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಇದು ಡಿಸ್ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಲೇಯರ್ಡ್ ಆಗಿದೆ.
ಮೊಬೈಲ್ ನ ಹಿಂದಿನ ಕ್ಯಾಮೆರಾಗಳು
ಹಿಂದಿನ ಕ್ಯಾಮೆರಾಗಳು ಸೋನಿ IMX890 50MP ಪ್ರಾಥಮಿಕ ಸಂವೇದಕ, 112-ಡಿಗ್ರಿ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಲದೆ ಸೆಲ್ಫಿ ಕ್ಯಾಮೆರಾವು ಒನ್ಪ್ಲಸ್ 12R 16MP ಹೊಂದಿದೆ.