ಬೆಳಗಾವಿ: ಆ ಊರಲ್ಲಿ ಮಹಾ ಮಾರಿ ಕರೋನಾದಂತ ಕ್ಲಿಷ್ಟ ಸಮಯದಲ್ಲಿ ಕೇವಲ 3 ಜನ ಕರೋನದಿಂದ ಸಾವನ್ನಪ್ಪಿದರು. ಆದರೆ ಈಗ ದೇವಿಯ ಶಾಪಕ್ಕೆ ಒಂದೇ ತಿಂಗಳಿನಲ್ಲಿ 30 ಜನ ಬಲಿ ಆಗಿದ್ದಾರೆ. 10 ವರ್ಷದ ಮಕ್ಕಳಿಂದ ಹಿಡಿದು 60 ವರ್ಷದ ವಯಸ್ಕರು ಸಹ ಸಾವನ್ನಪ್ಪುತ್ತಿದ್ದು ದೇವಿಯ ಶಾಪ ಊರಿಗೆ ತಗುಲಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ದೇವಿಯ ಶಾಪ ತಟ್ಟಿರೋದು ನಿಜವಾ..? ದೇವಿ ಯಾಕೆ ಊರ ಜನಕ್ಕೆ ಶಾಪ ಕೊಡ್ತಾಳೆ ಅಂದ್ರಾ.. ಈ ಸ್ಟೋರಿ ನೋಡಿ. ಚಿಂತಾಕ್ರಾಂತರಾಗಿ ಕುಳಿತಿರುವ ಊರ ಜನ. ವಿರೂಪಗೊಂಡಿರುವ ದೇವರ ವಿಗೃಹ. ಸಾವಿನ ಮನೆಯಂತಾದ ಗ್ರಾಮ.
ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೂರನೂರು ಗ್ರಾಮದಲ್ಲಿ. ಈ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ಮನೆಯಲ್ಲೂ ಸಹ ಸಾವು ಸಂಭವಿಸುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳೂ ಸೇರಿದಂತೆ ದೊಡ್ಡವರ ವರೆಗೂ ಸಹ ಬೇರೆ ಬೇರೆ ಕಾರಣಗಳಿಂದ ತೀರಿ ಹೋಗುತ್ತಿದ್ದಾರೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ಎಡೆ ಮಾಡಿದ್ದು, ಸಾವಿಗೆ ನಿಖರ ಕಾರಣ ತಿಳಿಯದೆ ಗ್ರಾಮಸ್ಥರು ಇದು ದೇವಿ ಶಾಪ ಎಂದು ಹೇಳುತ್ತಿದ್ದಾರೆ.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಇನ್ನು ಗ್ರಾಮದಲ್ಲಿ ಸಾವುಗಳು ನಡೆಯುತ್ತಿದ್ದಂತೆ ಗ್ರಾಮದ ಹಲವರ ಮೈಯಲ್ಲಿ ದೇವಿ ಬಂದು ನೀವು ನನ್ನ ವಿಗೃಹವನ್ನು ವಿರೂಪ ಮಾಡಿದ್ದಿರಿ. ಹೀಗಾಗಿ ಊರಿಗೆ ನನ್ನ ಶಾಪ ಹತ್ತಿದೆ ಎಂದು ದೇವಿ ಹೇಳುತ್ತಿದ್ದಾಳಂತೆ. ಹೀಗಾಗಿ ಗ್ರಾಮಸ್ಥರು ಆತಂಕಗೊಂಡಿದ್ದು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದಾರೆ. ಅರ್ಚಕರ ಸಲಹೆಯಂತೆ ಹೊಮ ಹವನ ಹಾಗೂ ಅಭಿಷೇಕ ಮಾಡಿ ದೇವಿಯನ್ನು ಶಾಂತಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಒಟ್ಟಿನಲ್ಲಿ ಇದು ಶಾಪವೋ.. ಕಾಕತಾಳಿಯವೋ ದೇವರೆ ಬಲ್ಲ. ಆದರೆ ಸರಣಿ ಸಾವುಗಳು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ನಡೆಯುತ್ತಿರುವ ಸಾವುಗಳ ಬಗ್ಗೆ ನಿಖರ ಕಾರಣ ಪತ್ತರ ಹಚ್ಚಬೇಕಿದೆ.