ಗದಗ:- ಹೆಜ್ಜೇನು ಹುಳುಗಳ ದಾಳಿಗೆ ಓರ್ವನು ಸಾವನ್ನಪ್ಪಿದ್ದು 7-ಜನರಿಗೆ ಗಾಯಗಳಾದ ಘಟನೆ ಗದಗ ಜಿಲ್ಲೆಯ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ರಾಮ ಕರುನಾನಂದ ಮಠದ ಬಳಿ ನಡೆದಿದೆ.
ಗಂಡನಿಂದ ಕಿರುಕುಳ – ಐವರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ!
ಮಲ್ಲಸಮುದ್ರ ಗ್ರಾಮದ 40 ವರ್ಷದ ನಾಗಪ್ಪ ಸೊರಟೂರ ಎಂಬ ವ್ಯಕ್ತಿ ಮೃತ ದುರ್ದೈವಿಯಾಗಿದ್ದು ಇನ್ನುಳಿದ ಮೂರು ಜನ ಮಹಿಳೆಯರು ಹಾಗೂ ನಾಲ್ಕು ಜನ ಪುರುಷರಿಗೆ ಗಾಯಗಳಾಗಿವೆ.
ಹನುಮಂತಪ್ಪ ಹೊಸಳ್ಳಿ, ಧರ್ಮಣ್ಣ ಹುಬ್ಬಳ್ಳಿ, ಗಿಡ್ಡಪ್ಪ ಗುಡಿ, ರೇಣುಕಾ, ಕಮಲವ್ವ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಹೆಜ್ಜೆನು ದಾಳಿಗೊಳಗಾದವರ ನರಳಾಟದ ಗೋಳನ್ನು ಕೇಳತೀರದಾಗಿದೆ.
ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಹಾಗೂ ಕೆಲವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.