ಚಿತ್ರದುರ್ಗ : ಇಕೋ ಕಾರು ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು-ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ 150A ಬಳಿ ಅವಘಡ ಸಂಭವಿಸಿದೆ.
ದೊಡ್ಡಬಳ್ಳಾಪುರ: ಹೊಂಗೆ ಮರಕ್ಕೆ ನೇಣು ಬಿಗಿದು 15 ವರ್ಷದ ಬಾಲಕ ಸೂಸೈಡ್!
ಹಿರಿಯೂರು-ಚಳ್ಖಕೆರೆ ರಸ್ತೆಯ ಆರ್ ಕೆ ಪವರ್ ಬಳಿ, ಇಕೋ ಕಾರು ಮತ್ತೊಂದು ಕಾರನ್ನು ಓವರ್ ಟೇಕ್ ಮಾಡೋಕೆ ಹೋಗಿ ಅವಘಡ ಸಂಭವಿಸಿದೆ. ಹಿರಿಯೂರಿನ ಸಿದ್ಧನಾಯಕ ಸರ್ಕಲ್ ನಿವಾಸಿ ಸಿದ್ಧರಾಜು(35) ಮೃತ ದುರ್ದೈವಿಯಾಗಿದ್ದು, ಖಾಸಗಿ ಶುದ್ಧ ಕುಡಿಯುವ ನೀರಿನ ವ್ಯಾಪಾರಿಯಾಗಿದ್ದರು. ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.