ಒಂದು ದಿನ ನನ್ನ ಲಾಯಲ್ಟಿಗೆ ರಾಯಲ್ಟಿ ಸಿಗತ್ತೆ ಎಂದು ಹೇಳುವ ಮೂಲಕ CM ಹುದ್ದೆ ಬಗ್ಗೆ DCM ಡಿಕೆಶಿ ಗುಟ್ಟು ಬಿಟ್ಟ್ಕೊಟ್ಟಿದ್ದಾರೆ.
ಫೆಂಗಲ್ ಚಂಡಮಾರುತ ಎಫೆಕ್ಟ್: ಕರ್ನಾಟಕದ 10 ಜಿಲ್ಲೆಗಳಲ್ಲಿ ಶಾಲಾ, ಕಾಲೇಜಿಗೆ ರಜೆ!
ನನ್ನ ಸಿಎಂ ಸಿದ್ದರಾಮಯ್ಯ ನಡುವಿನ ಸಂಬಂಧ ಚೆನ್ನಾಗಿದೆ. ಈಗ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು. ಈ ವೇಳೆ ನೀವು ಮುಂದಿನ ವರ್ಷ ಸಿಎಂ ಆಗುತ್ತೀರಾ ಪ್ರಶ್ನೆಗೆ ನೇರವಾಗಿ ಉತ್ತರಿಸದ ಡಿಕೆಶಿ ನಕ್ಕು We Have An Agreement ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ನಾನು ಹೈಕಮಾಂಡ್ ಬ್ಲಾಕ್ ಮೇಲ್ ಮಾಡಿಲ್ಲ, ಮಾಡಲ್ಲ. ಅದು ನನ್ನ ವೀಕ್ನೇಸ್. ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತೇನೆ. ಯಾವುದೇ ಪೋಸ್ಟ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ.
ಒಂದು ದಿನ ನನ್ನ ಲಾಯಲ್ಟಿಗೆ ರಾಯಲ್ಟಿ ಸಿಗಲಿದೆ. ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ನನಗೆ ಗಾಂಧಿ ಕುಟುಂಬದ ಬಗ್ಗೆ ಪ್ರೀತಿ ಇದೆ. ನಾನು ಪಾರ್ಟಿ ಹೇಳಿದಂತೆ ಹೋಗುತ್ತೇನೆ. ನಮ್ಮ ನಡುವೆ ಕೆಲ ಒಪ್ಪಂದ ನಡೆದಿದೆ. ಅದನ್ನ ಮಾಧ್ಯಮಗಳ ಮುಂದೆ ನಾನು ಚರ್ಚೆ ಮಾಡುವುದಿಲ್ಲ ಎಂದರು.