ಬೆಂಗಳೂರು:- ಬಸ್ ನಲ್ಲಿ ಯುಪಿಐ ಪಾವತಿಯ ಮೂಲಕ ದಿನಕ್ಕೆ ಒಂದು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಹೊಸ BMTC ದಾಖಲೆ ನಿರ್ಮಿಸಿದೆ.
ಬೆಂಗಳೂರಿನಲ್ಲೊಂದು ಮನಮಿಡಿಯುವ ಸ್ಟೋರಿ: ಕಳ್ಳ ಮಗನ ಮೃತದೇಹ ಬೇಡ ಎಂದು ಹೊರಟ ತಾಯಿ!
ಈ ಹಿಂದೆ ಬಿಎಂಟಿಸಿ ಯಪಿಐ ಮೂಲಕ ಪ್ರತಿ ತಿಂಗಳಿಗೆ 8 ರಿಂದ 10 ಕೋಟಿ ಕಲೆಕ್ಷನ್ ಮಾಡ್ತಿತ್ತು, ಆದರೆ ಜನವರಿ 4 ರ ನಂತರ ಯುಪಿಐ ಮೂಲಕ ಟಿಕೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇದೀಗ ಕಳೆದ ಮೂರು ದಿನಗಳಿಂದ ಅಂದರೆ ಫೆಬ್ರವರಿಯಲ್ಲಿ ಪ್ರತಿದಿನ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಬಿಎಂಟಿಸಿಗೆ ಬರುತ್ತಿದೆ
ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಆದಾಯ ಸಂಗ್ರಹಿಸುವ ಮೂಲಕ ಬಿಎಂಟಿಸಿ ಮೂರೂ ಸಾರಿಗೆ ನಿಗಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಮೂಲಕ ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದಂತೆ ಆಗಿದೆ. ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ಕಿರಿಕ್ ಯುಪಿಐನಿಂದ ನಿಂತಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.