ಹುಬ್ಬಳ್ಳಿ : ಒಂದು ದೇಶ ಒಂದು ಚುನಾವಣೆ ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮಾಧ್ಯಮ ವಕ್ತಾರ ಬಸವರಾಜ ಮಾದರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಯ ಮೋದಿ ಸರ್ಕಾರ ದೇಶದಲ್ಲಿ ಒಂದು ರೀತಿ ಹಿಟ್ಲರ್ ಆಡಳಿತ ಮಾಡುತ್ತಿದ್ದಾರೆ ಹಾಗೂ ತುಘಲಕ್ ರೀತಿಯಲ್ಲಿ ಆಡಳಿತ ಮಾಡುತ್ತಿದ್ದಾರೆ. ಯಾಕಂದ್ರೆ ಮೋದಿ ಅವರ ಸಚಿವ ಸಂಪುಟ ಹಾಗೂ ಬಿಜೆಪಿ ನಾಯಕರುಗಳಿಗೆ ಮನುವಾದ ಸಿದ್ಧಾಂತದ ಮೇಲೆ ಪ್ರಜಾಪ್ರಭುತ್ವವನ್ನು ನಡೆಸಬೇಕೆಂಬುದು ಮೂಲ ಅಜೆಂಡವಾಗಿದೆ.
Huuuಸಂವಿಧಾನದ ಮೇಲೆ ಆಡಳಿತ ನಡೆಸುವ ದೇಶ ನಮ್ಮದಾಗಿದೆ. ದೇಶದಲ್ಲಿರುವ ಪ್ರತಿ ಸಮುದಾಯಗಳಿಗೆ ಮತ್ತು ಪ್ರತಿ ಧರ್ಮಗಳಿಗೆ ನ್ಯಾಯ ಬದ್ಧವಾದ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ಶೈಕ್ಷಣಿಕ ನ್ಯಾಯ ಹಾಗೂ ರಾಜಕೀಯ ನ್ಯಾಯವನ್ನು ಒದಗಿಸಿಕೊಡುವ ಜವಾಬ್ದಾರಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇಲ್ಲ. ಇದಕ್ಕೆ ಧಕ್ಕೆ ತರುವುದಕ್ಕೆ ಬಿಜೆಪಿ ಪಕ್ಷ ಮತ್ತು ಆರ್ ಎಸ್ ಎಸ್ ಸಂಘಟನೆಯು ದೇಶದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತುಘಲಕ್ ಆಡಳಿತವನ್ನು ಮತ್ತು ಆರ್ ಎಸ್ ಎಸ್ ಸಿದ್ದಾಂತಗಳನ್ನು ಬಲಪ್ರಯೋಗ ಮಾಡುತ್ತಾ ಸಂವಿಧಾನಕ್ಕೆ ವಿರುದ್ಧವಾದ ತೀರ್ಮಾನಗಳು ಹಾಗೂ ಕಾಯ್ದೆಗಳನ್ನು ತರುತ್ತಿದ್ದಾರೆ.
ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವಂತಹ ಅನೇಕ ಕಾಯಿದೆಗಳನ್ನು ಕಳೆದ 15 ವರ್ಷಗಳಲ್ಲಿ ಜಾರಿ ಮಾಡುತ್ತಾ ಬಂದಿದ್ದಾರೆ. ನೋಟ್ ಬ್ಯಾನ್ ಮಾಡುವುದು, ಜಮ್ಮು& ಕಾಶ್ಮೀರ ಅಲ್ಲಿರುವ ಪ್ರಜಾಪ್ರಭುತ್ವವನ್ನು ಕಸಿದುಕೊಳ್ಳುವುದು, ರೈತರ ವಿರುದ್ಧ ಕಾಯ್ದೆಗಳು, ಮೀಸಲಾತಿಯನ್ನು ಕಸಿದುಕೊಳ್ಳುವ ಕಾಯ್ದೆಗಳು, ಕಾರ್ಮಿಕರ ಬದುಕನ್ನು ನಾಶ ಮಾಡುವ ಕಾಯ್ದೆಗಳು, ದೇಶದ ವಿದ್ಯಾವಂತ ಯುವಕರ ಉದ್ಯೋಗವನ್ನು ಕಿತ್ತುಕೊಳ್ಳುವ ಕಾಯ್ದೆಗಳು, ಮಹಿಳಾ ಸ್ವಾತಂತ್ರವನ್ನು ಕಸಿದುಕೊಳ್ಳುವ ತೀರ್ಮಾನಗಳು, ಧರ್ಮ ಧರ್ಮಗಳಲ್ಲಿ ದ್ವೇಷ ಹಚ್ಚಿಸುವ ಕಾಯ್ದೆಗಳು ಸಾಕಷ್ಟು ರೀತಿಯ ಹಿಟ್ಲರ್ ಮತ್ತು ತುಘಲಕ್ ಆಡಳಿತದ ಸಿದ್ಧಾಂತದ ಕಾಯ್ದೆಗಳು ಮತ್ತು ಆರ್ ಎಸ್ ಎಸ್ ಕಾಯ್ದೆಗಳನ್ನು ಮಾಡುತ್ತಾ ಬಂದಿದ್ದಲ್ಲದೆ, ಈಗ ಒಂದು ದೇಶ ಒಂದು ಚುನಾವಣೆ ತುಘಲಕ್ ರೀತಿ ತೀರ್ಮಾನವನ್ನು ಅನುಮೋದನೆ ಮಾಡಲು ಪ್ರಾರಂಭ ಮಾಡಿದರೆ,
ಇವರ ಉದ್ದೇಶ ದೇಶ ಆರ್ಥಿಕವಾಗಿ ನಷ್ಟವಾಗುತ್ತಿದೆ. ಹೆಚ್ಚು ಸಮಯ ಚುನಾವಣೆಗಳಿಂದ ವ್ಯರ್ಥವಾಗ್ತಾ ಇದೆ ಅನ್ನೋ ಒಂದು ಭ್ರಮೆಯಿಂದ ದೇಶದ ಜನರಿಗೆ ತೋರಿಸುತ್ತಾ ಮಾಹಿತಿಗಳನ್ನು ಹೇಳುತ್ತಾ ದೇಶದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ದೇಶ ಒಂದು ಚುನಾವಣೆಯಿಂದ ಆಗುವ ಪರಿಣಾಮಗಳು ಏನು ಅಂದ್ರೆ ಮೋದಿ ಸರ್ಕಾರಕ್ಕೆ ದೇಶದಲ್ಲಿರುವ 140 ಕೋಟಿ ಜನ ಒಂದು ಧರ್ಮದ ಜಾತಿಯವರ ಅಥವಾ ಒಂದು ಧರ್ಮದವರ ಎಂಬುದು ಮೋದಿ ಸರ್ಕಾರ ತಿಳಿದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿದೆ. ದೇಶದಲ್ಲಿ ಜಾತಿ ವ್ಯವಸ್ಥೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದು ಮೋದಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ.
ದೇಶದಲ್ಲಿರುವ ಪ್ರತಿಯೊಂದು ಸಮುದಾಯಗಳಿಗೆ ಬಿಜೆಪಿಯ ಮೋದಿ ಸರ್ಕಾರದಿಂದ ಕಳೆದ 15 ವರ್ಷದಿಂದ ಸಾಮಾಜಿಕ ನ್ಯಾಯ ಆರ್ಥಿಕ ನ್ಯಾಯ, ಮತ್ತು ಶೈಕ್ಷಣಿಕ ನ್ಯಾಯ ಒದಗಿಸಿದ್ದಾರಾ ಎಂಬುದನ್ನು ಮೋದಿಯವರು ಉತ್ತರ ನೀಡಬೇಕಾಗಿದೆ. ನಮ್ಮ ದೇಶವು ಒಕ್ಕೂಟ ರಾಜ್ಯಗಳನ್ನು ಹೊಂದಿರುವ ದೇಶ ಎಂಬುದು ಮೋದಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ವಿಧಾನಸಭಾ ಮತ್ತು ವಿಧಾನ ಪರಿಷತ್ ಚುನಾವಣೆಗಳು ನಿಗದಿತ ಸಮಯದಲ್ಲಿ ಸ್ವತಂತ್ರ ಬಂದಾಗಿಂದ ಇಂದಿನವರೆಗೂ ಚುನಾವಣೆ ನಡೆಯುತ್ತಿದೆಯಾ ಅಥವಾ ತಮ್ಮ ರಾಜ್ಯಗಳ ರಾಜಕೀಯ ಚುನಾವಣೆಗಳು ಸಂದರ್ಭದಲ್ಲಿ ತಕ್ಕಂತೆ ಚುನಾವಣೆಗಳು ನಡೆಯುವುದಕ್ಕೆ ಕಾರಣಗಳೇನು ? ಇನ್ನೂ ಸರಿಯಾದ ರೀತಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಪರಿಶೀಲನೆ ಮಾಡಿಲ್ಲ. ಯಾಕಂದ್ರೆ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಮಾಡುವುದು ಮಾತ್ರ ಹಾಗೂ ಆಸೆ ಆಮಿಷಗಳನ್ನು ತೋರಿಸಿ ರಾಜಕೀಯ ನಾಯಕರುಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಕುತಂತ್ರ ಬುದ್ಧಿ ಬಿಜೆಪಿ ನಾಯಕರುಗಳಿಗೆ ತಿಳಿದಿದ್ರು ಒಂದು ದೇಶ ಒಂದು ಚುನಾವಣೆ ಹೇಗೆ ನಡೆಸುವುದಕ್ಕೆ ಸಾಧ್ಯ ಎಂಬುದು ಅರ್ಥವಾಗುತ್ತಿಲ್ಲ. ದೇಶದಲ್ಲಿ ಇವತ್ತಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಮತ್ತು ಬೇರೆ ಸಮುದಾಯದ ಎಷ್ಟು ಜನಸಂಖ್ಯೆ ಇದ್ದಾರೆ ಜಾತಿವಾರು ಜನಸಂಖ್ಯೆ ಎಷ್ಟು ಸಮುದಾಯಗಳಿದ್ದಾರೆ ಅಂತ ಸಮುದಾಯಗಳಿಗೆ ಮೂಲಭೂತ ಶೈಕ್ಷಣಿಕ ಮತ್ತು ರಾಜಕೀಯ ಮೀಸಲಾತಿ ಮತ್ತು ಸೌಲಭ್ಯಗಳು ಸರಿಯಾದ ಅಂಕಿ ಅಂಶಗಳನ್ನು ಆಧರಿತವಾಗಿ ಇಲ್ಲದಿದ್ದರೂ ಇಂತಹ ತೀರ್ಮಾನಗಳು ತೆಗೆದುಕೊಳ್ಳುವುದು ಎಷ್ಟು ಸರಿ? ದೇಶದಲ್ಲಿರುವ ಒಂದೊಂದು ರಾಜ್ಯದಲ್ಲಿ ಎಷ್ಟು ಪ್ರಾದೇಶಿಕ ಪಕ್ಷಗಳಿವೆ ಮತ್ತು ಎಷ್ಟು ರಾಷ್ಟ್ರೀಯ ಪಕ್ಷಗಳಿವೆ. ಒಂದು ವೇಳೆ ಒಂದು ದೇಶ ಒಂದು ಚುನಾವಣೆ ನಡೆದ ನಂತರ ಎಷ್ಟು ಪಕ್ಷಗಳ ನಾಯಕರುಗಳು ಅಧಿಕಾರ ಮಾಡೋದಕ್ಕೆ ಯಾವ ರೀತಿಯಲ್ಲಿ ಆಪರೇಷನ್ ಕಮಲ ಆಗುತ್ತಾರೆ. ಯಾವ ರೀತಿಯಲ್ಲಿ ಸರ್ಕಾರಗಳು ಬಿದ್ದು ಹೋಗುತ್ತವೆ. ಮತ್ತೆ ಯಾವ ರೀತಿಯಲ್ಲಿ ಜಂಟಿ ಸರ್ಕಾರಗಳು ಬರುತ್ತವೆ ಹಾಗೂ ಯಾವ ರೀತಿಯಲ್ಲಿ ಮತ್ತೆ ಚುನಾವಣೆಗಳಿಗೆ ರಾಜ್ಯಗಳಲ್ಲಿ ನಡೆಯುತ್ತವೆ ಎಂಬ ಮುಂದಾಲೋಚನೆಗಳು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಈ ರೀತಿಯಾಗಿ ಸಾಕಷ್ಟು ನಷ್ಟ ಪರಿಣಾಮಗಳು ದೇಶದಲ್ಲಿರುವ ಪ್ರತಿಯೊಂದು ಸಮುದಾಯದ ನಾಯಕರಿಗೆ ಮತ್ತು ಪ್ರತಿಯೊಂದು ಧರ್ಮಗಳ ನಾಯಕರಿಗೆ ಪರಿಣಾಮ ಬೀರುತ್ತೆ. ಇದರಿಂದ ಅಭಿವೃದ್ಧಿ ಹೇಗೆ ಕುಂಟಿತವಾಗುತ್ತೆ ಹಾಗೂ ದೇಶದಲ್ಲಿ ಹೇಗೆ ಗದ್ದಲ ಮತ್ತು ಕಿತ್ತಾಟಗಳು ದೇಶದಲ್ಲಿ ಪ್ರಾರಂಭವಾಗುತ್ತವೆ ಎಂಬುದು ಕೇಂದ್ರ ಬಿಜೆಪಿ ನಾಯಕರಿಗೆ ಪರಿಜ್ಞಾನ ಇಲ್ಲ. ಆದ್ದರಿಂದ ಇಂತಹ ಪರಿಣಾಮ ಬೀರದಂತೆ ನಮ್ಮ ದೇಶವು ಒಕ್ಕೂಟ ರಾಜ್ಯಗಳ ವ್ಯವಸ್ಥೆಯನ್ನು ಹೊಂದಿರುವುದರಿಂದ ಒಂದು ದೇಶ ಒಂದು ಚುನಾವಣೆ ನಮ್ಮ ದೇಶಕ್ಕೆ ಸೂಕ್ತ ಅಲ್ಲ ಎಂಬುದನ್ನು ಕೇಂದ್ರದ ಬಿಜೆಪಿ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಇದನ್ನು ಜಾರಿಯಾಗದಂತೆ ತಡೆಯುವ ಜವಾಬ್ದಾರಿ ಪ್ರತಿಯೊಬ್ಬ ದೇಶದ ನಾಗರೀಕರ ಮತ್ತು ಯುವಕರ ಜವಾಬ್ದಾರಿಯಾಗಿದೆ. ಇಂತಹ ತುಘಲಕ್ ಆಡಳಿತದ ತೀರ್ಮಾನಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರವನ್ನು ಹಾಕಬೇಕಾಗಿದೆ ಎಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.