2ನೇ ಬಾರಿಗೆ ಆರ್ಸಿಬಿ ದಾಖಲೆ ನುಚ್ಚುನೂರು ನೂರಾಗಿದ್ದು, ಐಪಿಎಲ್ ಇತಿಹಾಸದಲ್ಲಿ KKR ಮತ್ತೊಂದು ವಿಶೇಷ ಸಾಧನೆ ಮಾಡಿದೆ.
7 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸುವ ಮೂಲಕ ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಸಿಡಿಸಿದ 2ನೇ ತಂಡ ಹೆಗ್ಗಳಿಗೆಕೆ ಕೆಕೆಆರ್ ತಂಡ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಿನಲ್ಲಿತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಚಚ್ಚಿದ್ದರು.
ಆದ್ರೆ ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 277 ಬಾರಿಸುವ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ನುಚ್ಚುನೂರು ಮಾಡಿತ್ತು. ಈದೀಗ ಕೋಲ್ಕತ್ತಾ ನೈಟ್ರೈಡರ್ಸ್ 272 ರನ್ ಸಿಡಿಸುವ ಮೂಲಕ ಆರ್ಸಿಬಿ ದಾಖಲೆಯನ್ನ ನುಚ್ಚುನೂರು ಮಾಡಿದೆ. ಆದ್ರೆ ಹೈದರಾಬಾದ್ ತಂಡದ 277 ರನ್ಗಳ ದಾಖಲೆ ಮುರಿಯುವಲ್ಲಿ ವಿಫಲವಾಯಿತು.
ಆರಂಭದಿಂದಲೇ ಡೆಲ್ಲಿ ಬೌಲರ್ಗಳನ್ನು ಬೆಂಡೆತ್ತಲು ಶುರು ಮಾಡಿದ ಕೆಕೆಆರ್ ಬ್ಯಾಟರ್ಗಳು ಕೊನೇವರೆಗೂ ಕ್ರೀಸ್ನಲ್ಲಿ ಅಬ್ಬರಿಸಿದರು. ಮೊದಲ ವಿಕೆಟ್ಗೆ ಪಿಲ್ ಸಾಲ್ಟ್ – ಸುನೀಲ್ ನರೇನ್ ಜೋಡಿ 27 ಎಸೆತಗಳಲ್ಲಿ 60 ರನ್ ಬಾರಿಸಿದರೆ, 2ನೇ ವಿಕೆಟ್ಗೆ ರಘುವಂಶಿ ಮತ್ತು ಸುನೀಲ್ ನರೇನ್ ಜೋಡಿ 48 ಎಸೆತಗಳಲ್ಲಿ ಬರೋಬ್ಬರಿ 104 ರನ್ ಕಲೆಹಾಕಿತು. ಈ ಬೆನ್ನಲ್ಲೇ ರಸೆಲ್-ಅಯ್ಯರ್ ಜೋಡಿ ಕೇವಲ 24 ಎಸೆತಗಳಲ್ಲಿ ಸ್ಫೋಟಕ 56 ರನ್ ಬಾರಿಸಿದರೆ, ರಿಂಕು-ರಸೆಲ್ ಜೋಡಿ ಕೇವಲ 11 ಎಸೆತಗಳಲ್ಲಿ 32 ರನ್ ಚಚ್ಚಿತು. ಪರಿಣಾಮ ತಂಡದ ಮೊತ್ತ 270 ರನ್ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 272 ರನ್ ಬಾರಿಸಿತು.