ಗದಗ :- ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಗೋಡೆ ಮೇಲೆ ಚಿತ್ರ ಹಾಕಲಾಗಿದೆ. ಪಟ್ಟಣದ ಹಳ್ಳದಕೇರಿಯಲ್ಲಿ ಮನೆಗಳ ಗೋಡೆ ಮೇಲೆ ಚಿತ್ರ ಹಾಕಲಾಗಿದ್ದು, ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಚಿತ್ರದ ಬರವಣಿಗೆ ಹಾಕಲಾಗಿದೆ.
ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಬರವಣಿಗೆ ಹಾಕಲಾಗಿದ್ದು, ಅಬ್ ಕೀ ಬಾರ ಚಾರಸೋ ಪಾರ್, ಅಬಕೀ ಬಾರ ಮೋದಿ ಸರ್ಕಾರ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಚಿತ್ರ ಬಿಡಿಸಿದ್ದಾರೆ.