ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಂಗು ಜೋರಾಗುತ್ತಿದ್ದು, ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಕಮಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಹಾಗೂ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಎರಡೂ ಪಕ್ಷಗಳು ಭರ್ಜರಿ ರೋಡ್ ಶೋ ನಡೆಸಲಿವೆ.
ಇದರ ಬೆನ್ನಲ್ಲೇ ನಾಮಿನೇಷನ್ ದಿನವೇ ಗೋ ಬ್ಯಾಕ್ ಸುನಿಲ್ ಬೋಸ್ ಪೋಸ್ಟರ್ ಪ್ರತ್ಯೇಕ್ಷ ವಾಗಿದೆ. ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿದ ಅನಾಮಿಕರು ಚಾಮರಾಜನಗರ ರಸ್ತೆಯಲ್ಲಿ ಗೋ ಬ್ಯಾಕ್ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇಂಟಿನಲ್ಲಿ ಗೋ ಬ್ಯಾಕ್ ಸುನಿಲ್ ಬೋಸ್ ಎಂದು ಬರೆದಿದ್ದು, ಮರಳು ಮಾಫಿಯಾ ದೊರೆಗೆ ಮರಳಾಗಬೇಡಿ ಎಂದು ಪೋಸ್ಟರ್ ಬರಹವಾಗಿದೆ.