ಗದಗ:- ಅಂಬೇಡ್ಕರ್ ಜಯಂತಿ ದಿನವೇ ಅಂಬೇಡ್ಕರ್ ಗೆ ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮೇವುಂಡಿಯಲ್ಲಿ ಘಟನೆ ಜರುಗಿದೆ.
ಬಳ್ಳಾರಿಗೆ ನಾಸೀರ್ ಹುಸೇನ್ ಆಗಮನ! – ಬಿಜೆಪಿ ಕಾರ್ಯಕರ್ತರ ಭಾರೀ ಹೈಡ್ರಾಮ!
ಮೇವುಂಡಿಯ ಬಸ್ ನಿಲ್ದಾಣದಲ್ಲಿರುವ ಸಂವಿಧಾನ ಜಾಗೃತಿ ಬ್ಯಾನರಗೆ ಅಧಿಕಾರಿ ಓರ್ವ ಬಣ್ಣ ಬಳಿದಿದ್ದಾರೆ. ಅಂಬೇಡ್ಕರ್ ಗೆ ಬಣ್ಣ ಹಚ್ಚಿಮುಚ್ಚಿಸಿದ ಆರೋಪ ಪಿಡಿಓ ಕೇಳಿ ಬಂದಿದೆ. ಬಸವಣ್ಣನವರ ಫೋಟೋ ಹಾಗೇ ಬಿಟ್ಟು ಅಂಬೇಡ್ಕರ್ ಪೋಟೋಗೆ ಹಚ್ಚಿದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.
ಮೇವುಂಡಿ ಪಿಡಿಓ ಸಂತೋಷ ಹೂಗಾರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಮುಂಡರಗಿ ತಹಶಿಲ್ದಾರ , ತಾ.ಪಂ. ಇಒ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.