ನವಲಗುಂದ :ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ 2024-25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಜ 3 ರಂದು ಶುಕ್ರವಾರ ಬೆಳಿಗೆ 10:00 ಗಂಟೆಗೆ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಮೈದಾನ ನಡೆಯಲಿದೆ.
ಚಿನ್ನ ವಂಚಕಿ ಐಶೂಗೆ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ನಾಯಕರ ಜೊತೆಗೂ ನಂಟು?
ಶಲವಡಿ ಕೆ.ಪಿ.ಎಸ್ ಸರಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಎನ್. ವಿ. ಕುರವತ್ತಿಮಠರವರು ಕ್ರೀಡಾಕೂಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸರಕಾರಿ ಉರ್ದು ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಡಿ. ಜಿ. ಹುಲ್ಲೂರು ಆಗಮಿಸುವರು. ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಚೇರಮನ್ ರಾದ ಶೋಭಾ ಚಂದ್ರಶೇಖರ ದಾಡಿಭಾವಿ, ಹಾಗೂ ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷರಾದ ಅಬ್ದುಲರಝಾಕ ನದಾಫ ಉಪಸ್ಥಿತರಿರುವರು
ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಹೆಗಡೆ ಅಧ್ಯಕ್ಷತೆವಹಿಸುವರು. ಸಂಯೋಜಕರಾಗಿ ದೈಹಿಕ ಶಿಕ್ಷಕರಾದ ಎಂ ಎಸ್ ಮಾಳಣ್ಣವರ, ಬಾಬು ತಳಗಡೆ ಹಾಗೂ ಶಾಲಾ ಸಿಬ್ಬಂದಿ, ಪ್ರದಾನಿ, ಕ್ರೀಡಾ ಮಂತ್ರಿ, ಶಾಲಾ ಸಂಸತ್ತು ಇತರರು ಭಾಗವಹಿಸುವರು.