ಬೆಂಗಳೂರು:- ಕರವೇ ಆಯ್ತು ಈಗ ಕನ್ನಡ ಒಕ್ಕೂಟದಿಂದ ಡಿ.30ರಂದು ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿಗೆ ಕರೆ ನೀಡಲಾಗಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದೇ ತಿಂಗಳು 30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ನಡೆಸಲಾಗುವುದು ಎಂದು ಹೇಳಿದರು. ಅಲ್ಲದೇ ಸರ್ಕಾರಕ್ಕೆ ಪ್ರಮುಖ ಒತ್ತಾಯಗಳನ್ನು ಮಾಡಲು ತೀರ್ಮಾನಿಸಿವೆ.
ಸರ್ಕಾರಕ್ಕೆ ಪ್ರಮುಖ ಒತ್ತಾಯಗಳು
ಕನ್ನಡದಲ್ಲೇ ಕಡ್ಡಾಯವಾಗಿ ನಾಮಫಲಕಗಳು ಇರಲೇಬೇಕು.
ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಯಲೇಬೇಕು.
ಪದವೀಧರರಿಗೆ ಉದ್ಯೋಗ ನೀಡಲೇಬೇಕು.
ಪರಭಾಷೆಯವರ ದಾಂಧಲೆ ನಿಲ್ಲಲೇಬೇಕು.
ರೈಲ್ವೆಯಲ್ಲಿ ಹಾಗೂ ಬ್ಯಾಂಕುಗಳಲ್ಲಿ ಕನ್ನಡ ಬೇಕೇ ಬೇಕು.
ಐಟಿ-ಬಿಟಿಗಳಲ್ಲಿ ಹಾಗೂ ಅಂಗಡಿ ಮಾಲ್ಗಳಲ್ಲಿ ಕನ್ನಡ ಇರಲೇಬೇಕು,
ಹಿಂದಿ ಹೇರಿಕೆ ಬೇಡವೇ ಬೇಡ.
ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದಲ್ಲೇ ತೀರ್ಪು ಬರಬೇಕೆಂದು ಒತ್ತಾಯ
ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳಾದ ಡಾ| ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಹಾಗೂ ಹೆಚ್.ವಿ. ಗಿರೀಶ್ ಗೌಡ ಹಾಗೂ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.